ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಕಲ್ಲುಗಳ ಸಂಗ್ರಹ

Last Updated 6 ಜುಲೈ 2017, 7:36 IST
ಅಕ್ಷರ ಗಾತ್ರ

ಅಯೋಧ್ಯೆ: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್‌ ಮೇಲ್ವಿಚಾರಣೆಯಲ್ಲಿ ಕಲ್ಲುಗಳ ಸಂಗ್ರಹ ಆರಂಭಿಸಲಾಗಿದ್ದು, ಮೂರು ಟ್ರಕ್‌ಗಳಲ್ಲಿ ಕಲ್ಲುಗಳನ್ನು ತಂದಿಳಿಸಲಾಗಿದೆ.

‘ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಕೆಂಪು ಕಲ್ಲುಗಳನ್ನು ಇಲ್ಲಿಗೆ ತರಲಾಗಿದೆ. ಈ ಹಿಂದೆಯೂ ಕಲ್ಲುಗಳನ್ನು ತರಲಾಗಿತ್ತು. ಇನ್ನೂ ಕಲ್ಲುಗಳನ್ನು ತಂದು ಸಂಗ್ರಹಿಸಲಾಗುವುದು. ಹಿಂದೆ ಅಧಿಕಾರದಲ್ಲಿದ್ದ ಅಖಿಲೇಶ್‌ ಯಾದವ್‌ ಅವರ ನೇತೃತ್ವದ ಸರ್ಕಾರ ಕಲ್ಲುಗಳ ಸಂಗ್ರಹಕ್ಕೆ ನಿರ್ಬಂಧ ವಿಧಿಸಿದೆ’ ಎಂದು ವಿಎಚ್‌ಪಿ ಪ್ರತಿನಿಧಿ ಪ್ರಕಾಶ್‌ ಕುಮಾರ್‌ ಗುಪ್ತಾ ತಿಳಿಸಿದ್ದಾರೆ. 

‘ರಾಮ ಮಂದಿರ ನಿರ್ಮಾಣಕ್ಕಾಗಿ ಕಲ್ಲುಗಳ ದೊಡ್ಡ ಬ್ಲಾಕ್‌ಗಳನ್ನು ತರಲಾಯಿತು. ಉತ್ತರ ಪ್ರದೇಶದ ಹಿಂದಿನ ಸರ್ಕಾರ(ಅಖಿಲೇಶ್‌ ಯಾದವ್‌ ಸರ್ಕಾರ) ನಿರ್ಬಂಧ ವಿಧಿಸಿತ್ತು. ಆದರೆ, ಪ್ರಸ್ತುತ ಸರ್ಕಾರ(ಯೋಗಿ ಆದಿತ್ಯನಾಥ್‌ ಸರ್ಕಾರ) ಹಾಗೆ ಮಾಡಲಿಲ್ಲ’ ಎಂದು ವಿಎಚ್‌‍ಪಿಯ ಪ್ರಾಂತೀಯ ಮಾಧ್ಯಮ ಸಲಹೆಗಾರ ಶರದ್‌ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT