ಭಾನುವಾರ, ಡಿಸೆಂಬರ್ 8, 2019
25 °C

ಮೋದಿ ದುರ್ಬಲ ಪ್ರಧಾನಿ: ರಾಹುಲ್ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮೋದಿ ದುರ್ಬಲ ಪ್ರಧಾನಿ: ರಾಹುಲ್ ಟೀಕೆ

ನವದೆಹಲಿ: ಅಮೆರಿಕ ಪ್ರವಾಸದ ವೇಳೆ ಎಚ್‌1ಬಿ ವೀಸಾ ವಿಚಾರವನ್ನು ಪ್ರಸ್ತಾಪ ಮಾಡದೆ ಹಿಂದಿರುಗಿದ ನರೇಂದ್ರ ಮೋದಿ ಅವರು ‘ದುರ್ಬಲ ಪ್ರಧಾನಿ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಹುಲ್‌ ಗಾಂಧಿ ಮೋದಿ ದುರ್ಬಲ ಪ್ರಧಾನಿ ಎಂದು ಟ್ವೀಟ್‌ ಮಾಡಿದ್ದಾರೆ. ‘ಅಮೆರಿಕ ಪ್ರವಾಸದ ವೇಳೆ ಭಾರತದ ಪ್ರಧಾನಿ ಫೋಟೊ ಕ್ಲಿಕಿಸಲು ಗಮನ ಹರಿಸಿದರೇ ಹೊರೆತು ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ವಿಶ್ಲೇಷಿಸಿದ್ದಾರೆ.

‘ಭಾರತ ಆಡಳಿತಕ್ಕೆ ಒಳಪಟ್ಟ ಜಮ್ಮು ಕಾಶ್ಮೀರ’ ಎಂದು ಅಮೆರಿಕ ಹೇಳಿದರೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾತ್ರ ಮೌನವಹಿಸಿತ್ತು. ಜತೆಗೆ, ‘ಭಾರತೀಯ ಹಿತಾಸಕ್ತಿಗಳಿಗೆ ಆದ್ಯತೆ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೋದಿ ಅವರ ಅಮೆರಿಕ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ಆನಂದ್‌ ಶರ್ಮಾ, ‘ಭಾರತದ ಹಿತಾಸಕ್ತಿಗಳನ್ನು ಅಮೆರಿಕದ ಮುಂದೆ ದೃಢವಾಗಿ ಸಮರ್ಥಿಸಲು ಸಾಧ್ಯವಿಲ್ಲ. ಜತೆಗೆ, ರಾಷ್ಟ್ರ ಎದುರಿಸುತ್ತಿರುವ ಆತಂಕಗಳ ಬಗ್ಗೆ ಚರ್ಚಿಸುವ ಬದಲಿಗೆ ವಹಿವಾಟಿನ ಮಾತುಕತೆ ಇದಾಗಿದೆ. ಜತೆಗೆ, ಎಚ್‌1ಬಿ ವೀಸಾ ವಿಚಾರವನ್ನು ಪ್ರಸ್ತಾಪ ಮಾಡಬೇಕಾದದ್ದು ಪ್ರಧಾನಿ ಅವರ ಕರ್ತವ್ಯವಾಗಿತ್ತು’ ಎಂದಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಎಚ್‌1ಬಿ ವೀಸಾ ವಿಚಾರ ಚರ್ಚಿಸಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದಿದ್ದಾರೆ.

‘ಪ್ರಧಾನಿ ಮೋದಿ ಅವರು ತಮ್ಮ ಮೂರು ವರ್ಷಗಳ ಅಧಿಕಾರವಾಧಿಯಲ್ಲಿ ವಿವಿಧ ರಾಷ್ಟ್ರಗಳಿಗೆ 64  ಬಾರಿ ಪ್ರವಾಸವನ್ನು ಕೈಗೊಂಡಿದ್ದಾರೆ. ಆದರಿಂದ ದೇಶಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ, ಟಿ.ವಿ ಕಾರ್ಯಕ್ರಮಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಎಐಸಿಸಿ ವಕ್ತಾರ ಅಜಯ್ ಮಾಕನ್ ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)