ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಲ್ಲಿ ಅಡಗಿದ ಎಂಟು ಅಡಿ ಉದ್ದದ ಹೆಬ್ಬಾವು ರಕ್ಷಣೆ

Last Updated 6 ಜುಲೈ 2017, 9:37 IST
ಅಕ್ಷರ ಗಾತ್ರ

ಆಗ್ರಾ: ಭಾರತೀಯ ವಾಯುಪಡೆಯ ಸರಕು ಸಾಗಣೆ ವಿಮಾನದ(ಎಎನ್‌–32) ಬಲಭಾಗದ ಚಕ್ರದ ಬಳಿ ಎಂಟು ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದ್ದು, ಅದನ್ನು ಉರುಗ ತಜ್ಞರು ರಕ್ಷಿಸಿದ್ದಾರೆ.

‘ಹಾವು ದೊಡ್ಡ ಗಾತ್ರದ್ದಾಗಿದ್ದು, ಅದಕ್ಕೆ ಯಾವುದೇ ತೊಂದರೆ ಆಗದಂತೆ ಜೀವಂತವಾಗಿ ರಕ್ಷಿಸಲು ಸುಮಾರು ಐದು ತಾಸು ಬೇಕಾಯಿತ್ತು’ ಎಂದು ಸ್ವಯಂ ಸೇವಾ ಸಂಸ್ಥೆಯ ಉರುಗ ತಜ್ಞರು ತಿಳಿಸಿದ್ದಾರೆ.

ರಕ್ಷಿಸಿದ ಹಾವನ್ನು ಸಾರಿಗೆ ವಾಹನದಲ್ಲಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಾವನ್ನು ರಕ್ಷಿಸಿದ ಬಳಿಕ ಕಾರ್ಯಾಚರಣೆಯ ಬಗ್ಗೆ ವರದಿ ತಯಾರಿಸಿದ್ದು ವಾಯು ಪಡೆಯ ಸಾರಿಗೆ ವಿಭಾಗಕ್ಕೆ ನೀಡಲಾಗುವುದು ಎಂದು ಎಸ್‌ಒಎಸ್‌(ವನ್ಯಜೀವ ಸಂರಕ್ಷಣ ಸಂಸ್ಥೆ)ಯ ನಿರ್ದೇಶಕ ಎಂ.ವಿ. ಬೈಜು ರಾಜು ತಿಳಿಸಿದ್ದಾರೆ.

ಹೆಚ್ಚು ವಿಷಯುಕ್ತವಲ್ಲದ ಹಾವಿನ ಪ್ರಭೇಧ ಇದಾಗಿದ್ದು, ಭಾರತ ಸೇರಿದಂತೆ ಪಾಕಿಸ್ತಾನ, ಶ್ರೀಲಂಕಾ ರಾಷ್ಟ್ರಗಳಲ್ಲಿ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT