ಗುರುವಾರ , ಡಿಸೆಂಬರ್ 12, 2019
17 °C

ಮುಖ್ಯ ಚುನಾವಣಾ ಆಯುಕ್ತರಾಗಿ ಅಚಲ್‌ ಕುಮಾರ್‌ ಜ್ಯೋತಿ ಅಧಿಕಾರ ಸ್ವೀಕಾರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮುಖ್ಯ ಚುನಾವಣಾ ಆಯುಕ್ತರಾಗಿ ಅಚಲ್‌ ಕುಮಾರ್‌ ಜ್ಯೋತಿ ಅಧಿಕಾರ ಸ್ವೀಕಾರ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಅಚಲ್‌ ಕುಮಾರ್‌ ಜ್ಯೋತಿ ಅವರು ಗುರುವಾರ ಅಧಿಕಾರಿ ಸ್ವೀಕರಿಸಿದರು.

ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಅವರು ಇಂದು ನಿವೃತ್ತರಾಗಿದ್ದು, ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಅಚಲ್‌ ಕುಮಾರ್‌ ಜ್ಯೋತಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಅಚಲ್‌ ಕುಮಾರ್‌ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದರು.

1975ನೇ ಬ್ಯಾಚಿನ ಗುಜರಾತ್‌ ಕೇಡರ್‌ ಐಎಎಸ್‌ ಅಧಿಕಾರಿಯಾಗಿರುವ ಅಚಲ್‌, ಗುಜರಾತ್‌ ಮುಖ್ಯ ಕಾರ್ಯದರ್ಶಿಯಾಗಿ 2013ರಲ್ಲಿ ನಿವೃತ್ತಿಯಾಗಿದ್ದರು.

ಇದಕ್ಕೂ ಮುನ್ನ ವಿಚಕ್ಷಣಾ ಆಯುಕ್ತ, ಕಾಂಡ್ಲಾ ಬಂದರು ನಿಗಮದ ಅಧ್ಯಕ್ಷ, ಸರ್ದಾರ್‌ ಸರೋವರ್‌ ನರ್ಮದಾ ನಿಗಮದ ಮುಖ್ಯಸ್ಥ, ಕೈಗಾರಿಕೆ, ಕಂದಾಯ ಹಾಗೂ ನೀರಾವರಿ ಇಲಾಖೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 2015ರ ಮೇ 8ರಂದು ಚುನಾವಣಾ ಆಯೋಗದ ಆಯುಕ್ತರಾಗಿ ಅವರು ಅಧಿಕಾರ ಸ್ವೀಕರಿಸಿದ್ದರು.

ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ಅಧಿಕಾರಾವಧಿ ಐದು ವರ್ಷ ಅಥವಾ ಅವರಿಗೆ 65 ವರ್ಷದ ತನಕ ಹುದ್ದೆಯಲ್ಲಿರಬಹುದು. 21ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಅಚಲ್‌ ಕುಮಾರ್‌ 2018ರ ಜನವರಿಯಲ್ಲಿ ನಿವೃತ್ತರಾಗಲಿದ್ದಾರೆ.

ಪ್ರತಿಕ್ರಿಯಿಸಿ (+)