ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವವಿವಾಹಿತರಿಗೆ ಕಾಂಡೋಮ್ ಉಡುಗೊರೆ ನೀಡಲಿದೆ ಯೋಗಿ ಸರ್ಕಾರ

Last Updated 6 ಜುಲೈ 2017, 10:11 IST
ಅಕ್ಷರ ಗಾತ್ರ

ಲಖನೌ: ಕುಟುಂಬಯೋಜನೆಯ ಸಂದೇಶ ಸಾರುವ ಸಲುವಾಗಿ ನವವಿವಾಹಿತರಿಗೆ ಕಾಂಡೋಮ್ ಒಳಗೊಂಡಿರುವ ಕಿಟ್ ಉಡುಗೊರೆ ನೀಡಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರ ಮುಂದಾಗಿದೆ.

‘ಮಿಷನ್ ಪರಿವಾರ್ ವಿಕಾಸ್’ ಯೋಜನೆಯಡಿ ಈ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ. ವಿಶ್ವ ಜನಸಂಖ್ಯಾ ದಿನವಾದ ಜುಲೈ 11ರಂದು ‘ಮಿಷನ್ ಪರಿವಾರ್ ವಿಕಾಸ್’ ಅನುಷ್ಠಾನಕ್ಕೆ ಬರಲಿದೆ ಎಂದು ಯೋಜನೆಯ ವ್ಯವಸ್ಥಾಪಕರ ಹೇಳಿಕೆ ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಿಟ್‌ನಲ್ಲಿ ಕಾಂಡೋಮ್ ಮಾತ್ರವಲ್ಲದೆ ಗರ್ಭನಿರೋಧಕ ಗುಳಿಗೆಗಳು, ಸೌಂದರ್ಯವರ್ಧಕ ಸಾಧನಗಳು ಇರಲಿವೆ. ಕುಟುಂಬಯೋಜನೆಯ ಮಹತ್ವ ಸಾರುವ ಸಂದೇಶವುಳ್ಳ ಕಾಗದಪತ್ರವೊಂದು ಕಿಟ್‌ ಜತೆ ಇರಲಿದೆ. ಆಶಾ ಕಾರ್ಯಕರ್ತೆಯರು ಕಿಟ್‌ಗಳನ್ನು ವಿತರಿಸಲಿದ್ದಾರೆ.

‘ವೈವಾಹಿಕ ಜೀವನದ ಜವಾಬ್ದಾರಿಗಳ ಬಗ್ಗೆ ನವವಿವಾಹಿತರಲ್ಲಿ ಅರಿವು ಮೂಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ’ ಎಂದು ‘ಮಿಷನ್ ಪರಿವಾರ್ ವಿಕಾಸ್’ ಯೋಜನೆಯ ಯೋಜನಾ ವ್ಯವಸ್ಥಾಪಕ ಅವನೀಶ್ ಸಕ್ಸೇನಾ ತಿಳಿಸಿದ್ದಾರೆ. ನವವಿವಾಹಿತರ ಬಳಕೆಗೆ ಅಗತ್ಯವಾದ ಕನ್ನಡಿ, ಬಾಚಣಿಗೆ ಮತ್ತಿತರ ಸೌಂದರ್ಯವರ್ಧಕ ಸಾಧನಗಳೂ ಕಿಟ್‌ನಲ್ಲಿ ಇರಲಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT