ಸೋಮವಾರ, ಡಿಸೆಂಬರ್ 16, 2019
18 °C

ಹೈಫಾದಲ್ಲಿನ ಸ್ಮಾರಕಕ್ಕೆ ಮೋದಿ ಭೇಟಿ; ಭಾರತೀಯ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಹೈಫಾದಲ್ಲಿನ ಸ್ಮಾರಕಕ್ಕೆ ಮೋದಿ ಭೇಟಿ; ಭಾರತೀಯ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಹೈಫಾ: ಇಸ್ರೇಲ್ ಪ್ರವಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೈಫಾಕ್ಕೆ ತೆರಳಿದ್ದು, ಮೊದಲನೇ ಮಹಾಯುದ್ಧದಲ್ಲಿ ಮಡಿದವರ ಸ್ಮಾರಕಕ್ಕೆ ಭೇಟಿ ನೀಡಿ, ಭಾರತೀಯ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದು.

ತಮ್ಮ ಮೂರು ದಿನದ ಪ್ರವಾಸದ ಕೊನೆಯ ದಿನ ನೇರೇಂದ್ರ ಮೋದಿ ಅವರು ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರ ಜತೆಗೂಡಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೈಫಾಕ್ಕೆ ತೆರಳಿದರು. ಉಭಯ ನಾಯಕರು ಸ್ಮಾರಕಕ್ಕೆ ಪುಷ್ಪಗುಚ್ಚ ಇರಿಸಿ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

1918ರಲ್ಲಿ ನಡೆದ ಮೊದಲನೆ ಮಹಾ ಯುದ್ಧದಲ್ಲಿ ಒಟ್ಟೊಮನ್‌ ಸಾಮ್ರಾಜ್ಯದ ಶಕ್ತಿಯುತ ಪಡೆಗಳಿಂದ ನಗರವನ್ನು ರಕ್ಷಿಸುವ ವೇಳೆ 44 ಭಾರತೀಯ ಯೋಧರು ಹೈಫಾದಲ್ಲಿ ಹುತಾತ್ಮರಾಗಿದ್ದರು.

ಪ್ರಧಾನಿ ನೇರೇಂದ್ರ ಮೋದಿ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಇಬ್ಬರು ನಾಯಕರು ಜತೆಯಾಗಿ ಹೈಫಾದಲ್ಲಿನ ಡೋರ್‌ ಬೀಚ್‌ನಲ್ಲಿ ನೀರಿಗಿಳಿದು ಕೆಲ ಕಾಲ ವಿಹರಿಸಿದರು.

ಹೈಫಾದ ಡೋರ್‌ ಬೀಚ್‌ನಲ್ಲಿ ಸಂಚಾರಿ ನೀರು ಶುದ್ಧೀಕರಣ ಘಟಕದ ಪ್ರಾತ್ಯಕ್ಷಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿದರು.

ಪ್ರತಿಕ್ರಿಯಿಸಿ (+)