ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌ ರ‍್ಯಾಂಕಿಂಗ್‌: 96ನೇ ಸ್ಥಾನಕ್ಕೇರಿದ ಭಾರತ

Last Updated 6 ಜುಲೈ 2017, 12:16 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಫುಟ್‌ಬಾಲ್‌ ತಂಡ ಅಂತರರಾಷ್ಟ್ರೀಯ ಫುಟ್‌ಬಾಲ್‌ ಒಕ್ಕೂಟ(ಫಿಫಾ) ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 96ನೇ ಸ್ಥಾನಕ್ಕೆ ಏರಿಕೆ ಕಂಡಿದ್ದು, ಇದು ಕಳೆದ ಎರಡು ದಶಕಗಳಲ್ಲಿ ತಂಡ ಹೊಂದಿದ ಅತ್ಯುತ್ತಮ ಶ್ರೇಯಾಂಕ ಎನಿಸಿದೆ.

ಭಾರತ ಇತ್ತೀಚೆಗೆ ಆಡಿದ 15 ಪಂದ್ಯಗಳ ಪೈಕಿ 13ರಲ್ಲಿ ಜಯ ಸಾಧಿಸಿರುವುದು ರ‍್ಯಾಂಕಿಂಗ್‌ ಏರಿಕೆ ಕಾರಣವಾಗಿದೆ. ಸದ್ಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿರುವ ಇರಾನ್‌, ಏಷ್ಯಾ ತಂಡಗಳಲ್ಲಿ ಅತ್ಯುತ್ತಮ ಸ್ಥಾನ ಹೊಂದಿರುವ ತಂಡ ಎನಿಸಿದ್ದು, ಈ ಸಾಲಿನಲ್ಲಿ ಭಾರತ 12ನೇ ಸ್ಥಾನ ಗಳಿಸಿದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಖಿಲ ಭಾರತ ಫುಟ್‌ಬಾಲ್‌ ಒಕ್ಕೂಟದ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಅವರು, ‘ಎರಡು ವರ್ಷಗಳ ಹಿಂದೆ ನಾವು 173ನೇ ಸ್ಥಾನದಲ್ಲಿದ್ದೆವು. ಈಗ ಅತ್ಯುತ್ತಮ ಸ್ಥಾನವನ್ನು ತಲುಪಿದ್ದೇವೆ. ಇದು ಭಾರತೀಯ ಫುಟ್‌ಬಾಲ್‌ನ ಸತ್ವವನ್ನು ಸಾರುತ್ತದೆ. ರಾಷ್ಟ್ರೀಯ ತಂಡದ ಎಲ್ಲಾ ಆಟಗಾರರು, ಸಿಬ್ಬಂದಿ, ಕೋಚ್‌ ಹಾಗೂ ಒಕ್ಕೂಟಕ್ಕೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.

2015ರ ಫೆಬ್ರುವರಿಯಲ್ಲಿ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ಅವರು ತಂಡದ ಕೋಚ್‌ ಹುದ್ದೆಗೆ ನೇಮಕವಾದಾಗ 171ನೇ ಸ್ಥಾನದಲ್ಲಿದ್ದ ತಂಡ ಬಳಿಕ 173ನೇ ಸ್ಥಾನಕ್ಕೆ ಕುಸಿದಿತ್ತು.

ಆ ನಂತರ ಹಂತ ಹಂತವಾಗಿ ಪ್ರದರ್ಶನ ಮಟ್ಟದಲ್ಲಿ ಸುಧಾರಣೆ ಕಂಡು, 2016ರ ಅಂತ್ಯಕ್ಕೆ 135ನೇ ಸ್ಥಾನಕ್ಕೇರಿತ್ತು. ಇದೀಗ ಇನ್ನಷ್ಟು ಉತ್ತಮ ಸಾಧನೆ ಮಾಡಿದೆ.

1996ರಲ್ಲಿ 94ನೇ ಸ್ಥಾನ ಗಳಿಸಿದ್ದು ಇದುವರೆಗಿನ ಅತ್ಯುತ್ತಮ ರ‍್ಯಾಂಕಿಂಗ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT