ಶನಿವಾರ, ಡಿಸೆಂಬರ್ 7, 2019
24 °C

ಆರೋಗ್ಯ ಸುಧಾರಣೆಗೆ ಅಮೆರಿಕದ ಕ್ಯಾಸಿನೋದಲ್ಲಿ ರಜನಿಕಾಂತ್‌! ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಆರೋಗ್ಯ ಸುಧಾರಣೆಗೆ ಅಮೆರಿಕದ ಕ್ಯಾಸಿನೋದಲ್ಲಿ ರಜನಿಕಾಂತ್‌! ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌

ನವದೆಹಲಿ: ಸೂಪರ್‌ಸ್ಟಾರ್‌ ರಜನಿಕಾಂತ್‌ ಫೋಟೋ ಟ್ವೀಟಿಸಿರುವ ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ, ಅಮೆರಿಕದ ಕ್ಯಾಸಿನೋದಲ್ಲಿ ಜೂಜಾಟದಲ್ಲಿರುವ ಈ ನಟನ ಸಂಪತ್ತಿನ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕು ಎಂದಿದ್ದಾರೆ.

‘ವಾವ್‌! ಆರೋಗ್ಯ ಸುಧಾರಣೆ ಆರ್‌ಕೆ 420 ಅಮೆರಿಕದ ಕ್ಯಾಸಿನೋದಲ್ಲಿ ಜೂಜಾಟ!! ಇವರ ಸಂಪತ್ತು(ಡಾಲರ್‌) ಎಲ್ಲಿಂದ ಬಂದಿದೆ ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕು’ ಎಂದು ಬುಧವಾರ ಟ್ವೀಟ್‌ ಮಾಡಿದ್ದಾರೆ.

ರಜನಿಕಾಂತ್‌(66ವರ್ಷ) ರಾಜಕೀಯ ಪ್ರವೇಶದ ಸುಳಿವು ಸಿಕ್ಕ ನಂತರದಲ್ಲಿ ಬಿಜೆಪಿ ಹಿರಿಯ ನಾಯಕರ ಟ್ವೀಟ್‌ ರಾಜಕೀಯ ತಿರುವು ಪಡೆದುಕೊಂಡಿದೆ.

ಈ ಹಿಂದೆ ರಜನಿಕಾಂತ್‌ ರಾಜಕೀಯ ಪ್ರವೇಶ ಕುರಿತು ಸುಬ್ರಮಣಿಯನ್‌ ಸ್ವಾಮಿ, ‘ಅವರಿಗೆ ರಾಜಕೀಯದಲ್ಲಿ ಯಾವುದೇ ಭವಿಷ್ಯವಿಲ್ಲ. ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಅರ್ಹರಲ್ಲ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮೊದಲ ಸೆಲ್ಫಿ ವಿಡಿಯೊ: ವೈದ್ಯಕೀಯ ತಪಾಸಣೆಗಾಗಿ ಅಮೆರಿಕದಲ್ಲಿರುವ ರಜನಿಕಾಂತ್‌ ಫೆರಾರಿ ಕಾರಿನ ಕುಳಿತು ಮೊದಲ ಬಾರಿಗೆ ಸೆಲ್ಫಿ ವಿಡಿಯೊ ರೆಕಾರ್ಡ್‌ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

ಫೆರಾರಿ ಕಾರಿನಲ್ಲಿ ಕುಳಿತಿರುವ ರಜನಿಕಾಂತ್‌ ಮೊಬೈಲ್‌ ಹಿಡಿದು ‘ಕೆಂಪು ಗುಂಡಿ ಒತ್ತಬೇಕೇ...ಸರಿ ಇದೆಯೇ’ ಎಂದು ಕೇಳುತ್ತ 30 ಸೆಕೆಂಡ್‌ ಸೆಲ್ಫಿ ವಿಡಿಯೊ ರೆಕಾರ್ಡ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)