ಭಾನುವಾರ, ಡಿಸೆಂಬರ್ 15, 2019
23 °C

ಗೌಡ್ರು ಹೋಟೆಲ್: ಎರಡು ಹಾಡುಗಳು ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌಡ್ರು ಹೋಟೆಲ್: ಎರಡು ಹಾಡುಗಳು ಬಾಕಿ

ಅಜ್ಜ ಹಾಗೂ ಮೊಮ್ಮಗನ ಬಾಂಧವ್ಯವನ್ನು ಹೇಳಲು ಹೊರಟಿರುವ ಚಿತ್ರ 'ಗೌಡ್ರು ಹೊಟೇಲ್'. 'ವಿಷ್ಣುವರ್ಧನ' ಚಿತ್ರ ನಿರ್ದೇಶನ ಮಾಡಿದ್ದ ಪಿ. ಕುಮಾರ್ ಅವರು ಈ ಚಿತ್ರದ ನಿರ್ದೇಶಕರು.

ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಈ ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ.

ಸಾಕಷ್ಟು ದೊಡ್ಡ ಮೊತ್ತ ಹೂಡಿಕೆ ಮಾಡಿ, ದೊಡ್ಡ ತಾರಾಬಳಗ ಹೊಂದಿಸಿ ನಿರ್ಮಿಸುತ್ತಿರುವ ಈ ಚಿತ್ರಕ್ಕಾಗಿ ಬೆಂಗಳೂರು, ಮೈಸೂರು, ವಿಜಯಪುರ, ಕುಂದಾಪುರ ಮುಂತಾದ ಕಡೆ ಐವತ್ತು ದಿನಗಳ ಚಿತ್ರೀಕರಣ ನಡೆದಿದೆ. ಪ್ರಕಾಶ್ ರೈ, ಅನಂತನಾಗ್ ಅವರ ಅಭಿನಯದ ಚಿತ್ರೀಕರಣ ಪೂರ್ಣಗೊಂಡಿದೆ.

ಬ್ರಿಟನ್‌ನಲ್ಲಿ ಎಂಜಿನಿಯರಿಂಗ್ ಓದಿರುವ ರಚನ್ ಚಂದ್ರ ಈ ಚಿತ್ರದ ಮೂಲಕ ನಾಯಕ ನಟನಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. 'ಶಿವಲಿಂಗ' ಚಿತ್ರದಲ್ಲಿ ಅಭಿನಯಿಸಿದ್ದ ವೇದಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಾತನ ಪಾತ್ರದಲ್ಲಿ ಪ್ರಕಾಶ್‍ ರೈ ಅಭಿನಯಿಸುತ್ತಿದ್ದಾರೆ.

ಚಿತ್ರದ ಐದು ಹಾಡುಗಳಿಗೆ ಇಳಯರಾಜ ಅವರ ಪುತ್ರ ಯುವನ್ ಶಂಕರ್ ರಾಜ ಸಂಗೀತ ನೀಡಿದ್ದಾರೆ. ಈ ಮೂಲಕ ಅವರು ಕೂಡ 'ಚಂದನವನ'ಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವವರು ಸತೀಶ್ ರೆಡ್ಡಿ. ಇವರ ಜೊತೆ ರಮೇಶ್ ಶಿವ, ಸತ್ಯನ್.ಎಸ್.ಪಿ ಕೈಜೋಡಿಸಿದ್ದಾರೆ. ಸಿಹಿಕಹಿ ಚಂದ್ರು, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ದೀಪಕ್ ಶೆಟ್ಟಿ, ಕಡ್ಡಿಪುಡಿ ಚಂದ್ರು, ಎಂ.ಎನ್.ಲಕ್ಷ್ಮೀದೇವಿ, ಎಂ.ಎನ್. ಸುರೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)