ಸೋಮವಾರ, ಡಿಸೆಂಬರ್ 16, 2019
23 °C

‘ಲವ್‌ ಗುರು’ ರಾಜೇಶ್‌ರ ‘ಫಸ್ಟ್‌ ಲವ್‌’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಲವ್‌ ಗುರು’ ರಾಜೇಶ್‌ರ ‘ಫಸ್ಟ್‌ ಲವ್‌’!

ಎಫ್‌ಎಂ ರೇಡಿಯೊ ಮೂಲಕ ಪರಿಚಿತರಾಗಿರುವ ರಾಜೇಶ್‌ ಅವರು ಸಿನಿತೆರೆಗೆ ಬರುತ್ತಿದ್ದಾರೆ – ‘ಫಸ್ಟ್‌ ಲವ್’ ಸಿನಿಮಾ ಮೂಲಕ. ಈ ಸಿನಿಮಾದ ಟ್ರೇಲರ್ ಈ ವಾರ ಬೆಂಗಳೂರಿನಲ್ಲಿ ಬಿಡುಗಡೆ ಆಗಿದೆ.

‘ಎಲ್ಲರ ಜೀವನದಲ್ಲೂ ಒಂದು ಫಸ್ಟ್‌ ಲವ್‌ ಇರುತ್ತದೆ. ಅದು ಹೇಗಿರುತ್ತದೆ ಎಂಬುದು ಈ ಸಿನಿಮಾ ವೀಕ್ಷಿಸಿದರೆ ಗೊತ್ತಾಗುತ್ತದೆ’ ಎನ್ನುತ್ತಾರೆ ನಿರ್ದೇಶಕ ಮಲ್ಲಿ ಅವರು. ಈ ಚಿತ್ರದ ಹಾಡುಗಳನ್ನು ವಿಶ್ವವಿಖ್ಯಾತ ಗೋಲ್‌ ಗುಂಬಜ್‌ ಆವರಣದಲ್ಲಿ, ಚಿಕ್ಕಮಗಳೂರಿನ ಕೆಲವು ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಒಟ್ಟು ಐದು ಹಾಡುಗಳು ಈ ಸಿನಿಮಾದಲ್ಲಿವೆ.

ಚಿತ್ರದ ನಾಯಕಿಯಾಗಿರುವ ಸ್ನೇಹಾ ನಾಯರ್ ಅವರು ಕೆಲವು ‘ಹಸಿ–ಬಿಸಿ’ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ! ಇದನ್ನು ಅವರು ‘ಕೆಲವು ಬೋಲ್ಡ್‌ ಸೀನ್‌ಗಳಲ್ಲಿ ಅಭಿನಯಿಸಿದ್ದೀನಿ’ ಎಂದು ಹೇಳಿಕೊಂಡಿದ್ದಾರೆ. ಆ ಸನ್ನಿವೇಶಗಳು ಯಾವುವು ಎಂಬುದನ್ನು ಸಿನಿಮಾ ವೀಕ್ಷಿಸಿಯೇ ತಿಳಿದುಕೊಳ್ಳಬೇಕು!

ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ನಟಿ ಪ್ರೇಮಾ ಅವರು, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡುವ ಸರದಿ ರಾಜೇಶ್ ಅವರದ್ದಾಗಿತ್ತು. ‘ಮೂರು ತಿಂಗಳುಗಳಿಂದ ಮುಂಬೈನಲ್ಲಿ ಇದ್ದುಕೊಂಡು, ಅಭಿನಯದ ಪಾಠ ಹೇಳಿಸಿಕೊಳ್ಳುತ್ತಿದ್ದೇನೆ’ ಎಂದರು.

‘ರೇಡಿಯೊದಲ್ಲಿ ಮಾತನಾಡಿ ಗೊತ್ತಿತ್ತೇ ವಿನಾ ಅಭಿನಯಿಸಿ ಗೊತ್ತಿರಲಿಲ್ಲ. ಆದರೆ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನಲ್ಲಿ ಧೈರ್ಯ ತುಂಬಿದರು’ ಎಂದು ಹೇಳಿಕೊಂಡರು. ಶ್ರೀಧರ್ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)