ಸೋಮವಾರ, ಡಿಸೆಂಬರ್ 9, 2019
23 °C

ಮತ್ತೆ ಪ್ರಭಾಸ್–ಅನುಷ್ಕಾ ಜೋಡಿ

Published:
Updated:
ಮತ್ತೆ ಪ್ರಭಾಸ್–ಅನುಷ್ಕಾ ಜೋಡಿ

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ 'ಬಾಹುಬಲಿ’ ಚಿತ್ರದಲ್ಲಿ ನಟಿಸಿದ ಪ್ರಭಾಸ್‌– ಅನುಷ್ಕಾ ಜೋಡಿ ಇದೀಗ ‘ಸಾಹೋ’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

ಪ್ರಭಾಸ್‌ಗೆ ನಾಯಕಿಯಾಗಿ ಅನುಷ್ಕಾ ಬಿಲ್ಲಾ’, 'ಮಿರ್ಚಿ’, 'ಬಾಹುಬಲಿ’, ’ಬಾಹುಬಲಿ–2’ ಚಿ   ತ್ರಗಳಲ್ಲಿ ಕಾಣಿಸಿಕೊಂಡಿದ್ದು ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. 'ಸಾಹೋ’ ಚಿತ್ರದಲ್ಲಿ ನಟಿಸುವ ಮೂಲಕ ಅನುಷ್ಕಾ–ಪ್ರಭಾಸ್ ಜೋಡಿ ಸತತ ಐದನೇ ಬಾರಿಗೆ ಒಟ್ಟಿಗೆ ನಟಿಸಿದಂತಾಗುತ್ತದೆ. ಇದು ಇಬ್ಬರ ಅಭಿಮಾನಿಗಳಲ್ಲೂ ಖುಷಿಗೆ ಕಾರಣವಾಗಿದೆ.

ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಸಾಹೋ’ ಚಿತ್ರ ₹150 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದ್ದು, ಈಗಾಗಲೇ ಸಿನಿಮಾದ 1ನಿಮಿಷ 24 ಸೆಕೆಂಡ್‌ನ ಮಿನಿ ಟ್ರೇಲರ್ ಬಿಡುಗಡೆಯಾಗಿದೆ. ತಂತ್ರಜ್ಞಾನವೇ ಮೇಲುಗೈ ಸಾಧಿಸಿರುವಂತೆ ಮೇಲ್ನೋಟಕ್ಕೆ ಕಾಣುವ ಈ ಟ್ರೇಲರ್‌ನಲ್ಲಿ ಪ್ರಭಾಸ್ ಕೆಲ ಸೆಕೆಂಡ್‌ಗಳಷ್ಟು ಮಾತ್ರ ಕಾಣಿಸಿಕೊಂಡಿದ್ದಾರೆ. ರಕ್ತದ ಕಲೆಗಳುಳ್ಳ ಪ್ರಭಾಸ್ ' ಇಟ್ಸ್‌ ಷೋ ಟೈಮ್’ ಎಂದು ಹೇಳಿ ಮುಗ್ನುಳಗುತ್ತಿರುವ ದೃಶ್ಯ ಪ್ರಭಾಸ್ ಅಭಿಮಾನಿಗಳಿಗೆ ಇಷ್ಟವಾಗುವಂತಿದೆ. ಉಳಿದಂತೆ ನಾಯಕಿ ಅನುಷ್ಕಾ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ.

ಚಿತ್ರದಲ್ಲಿ ಬಾಲಿವುಡ್‌ ನಟ ನೀಲ್ ನಿತಿನ್ ಮುಕೇಶ್‌ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರ 2018ಕ್ಕೆ ನಾಲ್ಕು ಭಾಷೆಗಳಲ್ಲಿ ತೆರೆಕಾಣಲಿದೆ. ಚಿತ್ರ ಸಾಹಸ ಹಾಗೂ ರೋಮಾಂಚನಕಾರಿ ಸನ್ನಿವೇಶಗಳನ್ನು ಒಳಗೊಂಡಿರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಪ್ರತಿಕ್ರಿಯಿಸಿ (+)