ಶುಕ್ರವಾರ, ಡಿಸೆಂಬರ್ 13, 2019
17 °C

ಮೋಪಿಂಗ್‌ ರೋಬೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋಪಿಂಗ್‌ ರೋಬೊ

ಐರೋಬಾಟ್‌ನ ಅಧಿಕೃತ ವಿತರಕ ಸಂಸ್ಥೆ ಪ್ಯೂರ್‌ಸೈಟ್ ಸಿಸ್ಟಮ್ಸ್, ಐರೋಬಾಟ್ ಬ್ರಾವಾ ಜೆಟ್ ಎಂಬ, ನೆಲ ಶುಚಿ ಮಾಡುವ ರೋಬೊವನ್ನು ಬಿಡುಗಡೆ ಮಾಡಿದೆ. ಅಡುಗೆ ಮನೆ, ಸ್ನಾನದ ಕೋಣೆಯ ಮೂಲೆಯಲ್ಲಿರುವ ಕೊಳೆಯನ್ನು ಇದು ಸ್ವಚ್ಛ ಮಾಡುತ್ತದೆ ಎನ್ನುತ್ತದೆ ಕಂಪೆನಿ. ಐರೋಬೋಟ್ ಫ್ಲಾಗ್‌ಶಿಪ್ ಸ್ಟೋರ್‌ಗಳು ಹಾಗೂ www.irobot.in ದೊರಕುತ್ತದೆ ಬೆಲೆ: 19,900.

***

ಕಸವನ್ನು ಗೊಬ್ಬರವಾಗಿಸುವ ಬುಟ್ಟಿ

ನಗರದಲ್ಲಿ ಹೆಚ್ಚುತ್ತಿರುವ ಕಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಮಾರಿಗೋಲ್ಡ್ ಸೋಲಾರ್ ಕಂಪೋಸ್ಟರ್ ಬಿಡುಗಡೆಗೊಂಡಿದೆ. ಹಲವು ದಿನ ಕಸ ವಿಲೇವಾರಿ ಮಾಡಲು ಸಾಧ್ಯವಾಗದೇ ಹೋದಾಗ ಈ ಕಂಪೋಸ್ಟರ್‌ ಅನ್ನು ಬಳಸಬಹುದು.

ಇದು ನೈಸರ್ಗಿಕವಾಗಿ ತ್ಯಾಜ್ಯವನ್ನು ಗೊಬ್ಬರವಾಗಿಸುತ್ತದೆ. ಈ ಉತ್ಪನ್ನವನ್ನು ಪ್ರುಡೆಂಟ್ ಇಕೊ ಸಿಸ್ಟಮ್ಸ್ ಸಂಸ್ಥೆ ಬಿಡುಗಡೆಗೊಳಿಸಿದೆ.

ಮಿನಿ ಕಂಪೋಸ್ಟರ್‌ನಲ್ಲಿ ಒಂದು ಲೀಟರ್‌ ಗೊಬ್ಬರವನ್ನು ಉತ್ಪಾದಿಸಬಹುದು. ಹಾಗೇ ಈ ಕಸದ ಬುಟ್ಟಿ 4-6 ವಾರಗಳ ತ್ಯಾಜ್ಯವನ್ನು ಸಂಗ್ರಹಿಸಿಕೊಳ್ಳಬಲ್ಲದು.

ಪ್ರತಿಕ್ರಿಯಿಸಿ (+)