ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿ ತರುವ ಕ್ರಿಸ್ಟಲ್‌ ವಸ್ತು

Last Updated 6 ಜುಲೈ 2017, 19:30 IST
ಅಕ್ಷರ ಗಾತ್ರ

ಸ್ಫಟಿಕದ ಆಲಂಕಾರಿಕ ವಸ್ತುಗಳಿಗೆ ವಾಸ್ತುವಿನಲ್ಲಿ ಮಹತ್ವವೂ ಇದೆ. ಇದನ್ನು ನಿಯಮ ಪ್ರಕಾರ ಇರಿಸುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎನ್ನುತ್ತದೆ ಫೆಂಗ್‌ ಶುಯಿ ವಾಸ್ತು.
ಚೀನಾದ ಫೆಂಗ್‌ ಶುಯಿ ವಾಸ್ತು ಹಾಗೂ ಭಾರತೀಯ ವಾಸ್ತು ಶಾಸ್ತ್ರದಲ್ಲಿ ಸ್ಫಟಿಕಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಹಾಗಿದ್ದರೆ ಈ ಹರಳಿನ ಅಲಂಕಾರಿಕ ವಸ್ತುವನ್ನು (ಕಮಲ) ಮನೆಯ ಯಾವ ದಿಕ್ಕಿನಲ್ಲಿ ಇರಿಸಬೇಕು ಎಂಬುದರ ಬಗ್ಗೆ ತಿಳಿಯೋಣ.

ಮನೆಯ ಲಿವಿಂಗ್‌ ರೂಂ, ಕಚೇರಿಯ ಟೇಬಲ್‌ ಮೇಲೆ ಹರಳಿನ ಕಮಲವನ್ನು ಇರಿಸುವುದರಿಂದ ಅದೃಷ್ಟ ಒಲಿಯುತ್ತದೆ. ಎಂತಹ ಕಷ್ಟವನ್ನೂ ನಿಭಾಯಿಸುವ ಆತ್ಮವಿಶ್ವಾಸವನ್ನು ಇದು ನೀಡುತ್ತದೆ.

ಮಲಗುವ ಕೋಣೆಯಲ್ಲಿ ಇರಿಸುವುದರಿಂದ ಕುಟುಂಬದಲ್ಲಿ ಶಾಂತಿ ನೆಲೆಸಿರುತ್ತದೆ. ಜಗಳವೂ ಕಡಿಮೆಯಾಗಿ ದಂಪತಿ ನಡುವೆ ಸಾಮರಸ್ಯ ಹೆಚ್ಚುತ್ತದೆ.

ಹರಳಿನ ಅನಾನಸ್‌ ಹಣ್ಣನ್ನು ಮನೆಯಲ್ಲಿ ಇಡುವುದರಿಂದ ಸುಖ, ಸಂಪತ್ತು, ಸಮೃದ್ಧಿ ನೆಲೆಸಿರುತ್ತದೆ. ಬೆಳಕು ಬರುವ ಜಾಗದಲ್ಲಿ ಇರಿಸಬೇಕು. ಬೆಳಕು ಅದರ ಮೂಲಕ ಪ್ರತಿಫಲನಗೊಳ್ಳುವಂತೆ ಮನೆಯೂ ಕಳೆಕಳೆಯಾಗಿ ಇರುತ್ತದೆ ಎನ್ನಲಾಗುತ್ತದೆ.

ಮನೆಯ ಲಿವಿಂಗ್‌ ರೂಂ, ಮಲಗುವ ಕೋಣೆ, ಕಚೇರಿಯ ದಕ್ಷಿಣ ಭಾಗದಲ್ಲಿ ಇರಿಸುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು.

ಹರಳಿನ ಭೂಪಟದ ಮಾದರಿಯನ್ನು ಮಕ್ಕಳ ಕೋಣೆಯಲ್ಲಿ ಈಶಾನ್ಯ ಭಾಗದಲ್ಲಿ ಇರಿಸುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ.ಗೋ

ಪುರ ಮಾದರಿಯ ಹರಳಿನ ಮಾದರಿ ಕುಟುಂಬದವರು ಆರೋಗ್ಯವಾಗಿ ಇರುವಂತೆ ಮಾಡುತ್ತದೆ. ಅಧ್ಯಯನ, ಕೆಲಸದಲ್ಲಿ ಚುರುಕಾಗಿರುವಂತೆ ಮಾಡುತ್ತದೆ. ನಕಾರಾತ್ಮಕ ಶಕ್ತಿಗಳಿಂದ ಮನೆಗೆ ರಕ್ಷಣೆ ನೀಡುತ್ತದೆ.

ಈ ಕಮಲವು ಪ್ರೀತಿ, ಸಮೃದ್ಧಿ, ಪರಿಶುದ್ಧತೆ, ನೆಮ್ಮದಿಯ ಸಮ್ಮಿಶ್ರಣದ ಸಂಕೇತ. ಖುಷಿ, ಯಶಸ್ಸು, ಪ್ರೀತಿ, ಅವಕಾಶಗಳನ್ನು ಹೊತ್ತು ತರುವ ಕಮಲದ ಪ್ರತಿಮೆಯನ್ನು ಮನೆ ಹಾಗೂ ಕಚೇರಿಯಲ್ಲಿ ಟ್ಟುಕೊಳ್ಳಬಹುದು.

ಮನಸ್ಸಿನ ದುಗುಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿ ಇರಬೇಕೆಂದರೆ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT