ಭಾನುವಾರ, ಡಿಸೆಂಬರ್ 8, 2019
19 °C

ಡಿಕ್ವೆಲ್ಲಾ–ಗುಣತಿಲಕ ಜುಗಲ್‌ಬಂದಿ

ಪಿಟಿಐ Updated:

ಅಕ್ಷರ ಗಾತ್ರ : | |

ಡಿಕ್ವೆಲ್ಲಾ–ಗುಣತಿಲಕ ಜುಗಲ್‌ಬಂದಿ

ಹಂಬಂಟೋಟಾ (ಎಎಫ್‌ಪಿ): ಆರಂಭಿಕ ಆಟಗಾರರಾದ ನಿರೋಷನ್‌ ಡಿಕ್ವೆಲ್ಲಾ ಮತ್ತು ಧನುಷ್ಕಾ ಗುಣತಿಲಕ ಅವರ ದ್ವಿಶತಕದ ಜೊತೆ ಯಾಟದ ಬಲದಿಂದ ಶ್ರೀಲಂಕಾ ತಂಡ ದವರು ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಗಳಿಸಿದ್ದಾರೆ.

ಇದರೊಂದಿಗೆ ಸಿಂಹಳೀಯ ನಾಡಿನ ತಂಡ 5 ಪಂದ್ಯಗಳ ಸರಣಿಯಲ್ಲಿ 2–1ರಲ್ಲಿ ಮುನ್ನಡೆ ಗಳಿಸಿದೆ. ಮಹಿಂದಾ ರಾಜಪಕ್ಷಾ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 310 ರನ್‌ ಗಳಿಸಿತು. ಕಠಿಣ ಗುರಿಯನ್ನು ಏಂಜೆಲೊ ಮ್ಯಾಥ್ಯೂಸ್‌ ಪಡೆ 47.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಡಿಕ್ವೆಲ್ಲಾ–ಗುಣತಿಲಕ ಜೊತೆಯಾಟ: ಗುರಿ ಬೆನ್ನಟ್ಟಿದ ಲಂಕಾ ತಂಡಕ್ಕೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಡಿಕ್ವೆಲ್ಲಾ (102;116ಎ, 14ಬೌಂ) ಮತ್ತು ಗುಣತಿಲಕ (116; 111ಎ, 15ಬೌಂ, 1ಸಿ) ಉತ್ತಮ ಆರಂಭ ಒದಗಿಸಿದರು. ಜಿಂಬಾಬ್ವೆ ಬೌಲರ್‌ಗಳನ್ನು ದಿಟ್ಟತನ ದಿಂದ ಎದುರಿಸಿದ ಇವರು 222 ಎಸೆತ ಗಳನ್ನು ಆಡಿ 229ರನ್‌ಗಳನ್ನು ಕಲೆಹಾಕಿ ದರು. ಈ ಮೂಲಕ ತಂಡದ ಗೆಲುವಿನ ಹಾದಿಯನ್ನು ಸುಗಮ ಮಾಡಿದರು.

ಇವರು ಹಾಕಿಕೊಟ್ಟ ಭದ್ರ ಅಡಿಪಾಯದ ಮೇಲೆ ಕುಶಾಲ್‌ ಮೆಂಡಿಸ್‌ (ಔಟಾಗದೆ 28; 25ಎ, 2ಬೌಂ) ಮತ್ತು ಉಪುಲ್‌ ತರಂಗಾ (ಔಟಾಗದೆ 44; 32ಎ, 3ಬೌಂ, 2ಸಿ) ಗೆಲುವಿನ ಗೋಪುರ ಕಟ್ಟಿದರು.

ಮಸಕಜ ಶತಕ: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ತಂಡ ಸವಾಲಿನ ಮೊತ್ತ ಪೇರಿ ಸಿತು. ಇದಕ್ಕೆ ಕಾರಣವಾಗಿದ್ದು ಆರಂಭಿಕ ಆಟಗಾರ ಹ್ಯಾಮಿಲ್ಟನ್‌ ಮಸಕಜ ಅವರ ಶತಕದ ಆಟ. 98 ಎಸೆತಗಳನ್ನು ಎದುರಿಸಿದ ಅವರು 15ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 111ರನ್‌ ಗಳಿಸಿ ಮಿಂಚಿದರು.

ತರಿಸೈ ಮುಸಕಾಂಡ (48; 57ಎ, 4ಬೌಂ, 1ಸಿ), ಸೀನ್‌ ವಿಲಿಯಮ್ಸ್‌ (43; 47ಎ, 2ಬೌಂ) ಮತ್ತು ಸಿಕಂದರ ರಾಜ (ಔಟಾಗದೆ 25; 17ಎ, 2ಬೌಂ, 1ಸಿ) ಅವರೂ ಲಂಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ತಂಡದ ಮೊತ್ತ ವನ್ನು 300ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 310 (ಹ್ಯಾಮಿಲ್ಟನ್‌ ಮಸಕಜ 111, ಸೊಲೊಮನ್‌ ಮಿರೆ 13, ತರಿಸೈ ಮುಸಕಾಂಡ 48, ಕ್ರೇಗ್‌ ಎರ್ವಿನ್‌ 16, ಸೀನ್‌ ವಿಲಿಯಮ್ಸ್‌ 43, ಮಾಲ್ಕಮ್‌ ವಾಲರ್‌ 17, ಸಿಕಂದರ ರಾಜ ಔಟಾಗದೆ 25, ಪೀಟರ್‌ ಮೂರ್‌ 24; ಲಸಿತ್‌ ಮಾಲಿಂಗ 71ಕ್ಕೆ1, ನುವಾನ್‌ ಪ್ರದೀಪ್‌ 28ಕ್ಕೆ1, ಲಕ್ಷಣ್‌ ಸಂದಕನ್‌ 73ಕ್ಕೆ1, ವಾನಿಂಡು ಹಸರಂಗ ಡಿಸಿಲ್ವ 44ಕ್ಕೆ2, ಅಸೆಲಾ ಗುಣರತ್ನೆ 53ಕ್ಕೆ2).

ಶ್ರೀಲಂಕಾ: 47.2 ಓವರ್‌ಗಳಲ್ಲಿ 2 ವಿಕೆಟ್‌ಗೆ 312 (ನಿರೋಷನ್‌ ಡಿಕ್ವೆಲ್ಲಾ 102, ಧನುಷ್ಕಾ ಗುಣತಿಲಕ 116, ಕುಶಾಲ್‌ ಮೆಂಡಿಸ್‌ ಔಟಾಗದೆ 28, ಉಪುಲ್‌ ತರಂಗ ಔಟಾಗದೆ 44; ಸೀನ್‌ ವಿಲಿಯಮ್ಸ್‌ 63ಕ್ಕೆ1, ಮಾಲ್ಕಂ ವಾಲರ್‌ 32ಕ್ಕೆ1). 

ಫಲಿತಾಂಶ: ಶ್ರೀಲಂಕಾ ತಂಡ ಕ್ಕೆ 8 ವಿಕೆಟ್‌ಗಳ ಗೆಲುವು ಹಾಗೂ 5 ಪಂದ್ಯಗಳ ಸರಣಿಯಲ್ಲಿ 2–1ರಲ್ಲಿ ಮುನ್ನಡೆ. ಪಂದ್ಯ ಶ್ರೇಷ್ಠ: ಧನುಷ್ಕಾ ಗುಣತಿಲಕ.

ಪ್ರತಿಕ್ರಿಯಿಸಿ (+)