ಭಾನುವಾರ, ಡಿಸೆಂಬರ್ 8, 2019
23 °C

‘ಮೌಲ್ಯಗಳಿಂದ ಮನುಷ್ಯ ಚಿರಸ್ಥಾಯಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೌಲ್ಯಗಳಿಂದ ಮನುಷ್ಯ ಚಿರಸ್ಥಾಯಿ’

ಬೆಂಗಳೂರು: ‘ಡಾ.ರಾಜ್‌ಕುಮಾರ್‌ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಕೊಂಡಿದ್ದರು. ಹಾಗಾಗಿಯೇ ಅವರನ್ನು ನಾವು ಇಂದಿಗೂ ಸ್ಮರಿಸುತ್ತೇವೆ. ಉತ್ತಮ ಜೀವನ ಶೈಲಿಯಿಂದ ಮನುಷ್ಯ ಸ್ಥಿರಸ್ಥಾಯಿಯಾಗುತ್ತಾನೆ’ ಎಂದು ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

ರಂಗಜಂಗಮ ಕಲಾನಿಕೇತನ ಸಂಸ್ಥೆ ಕಲಾಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಂಸ್ಕೃತಿ ಹಬ್ಬ’ದಲ್ಲಿ ಮಾತನಾಡಿದರು. ‘ಡಾ.ರಾಜ್‌ ಮತ್ತು ಕುವೆಂಪು ಅವರ ಸರಳತೆ ಮತ್ತು ಆದರ್ಶಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕಿದೆ’ ಎಂದು ಹೇಳಿದರು. ನಾಟ್ಯತರಂಗ ಕಲಾತಂಡದ 60ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಿದ ಕೊಂಕಣಿ ಯುಗಳ ಗೀತೆಗಳು ಮತ್ತು ರಘು ದೀಕ್ಷಿತ್‌ ಅವರ ಗಾಯನಕ್ಕೆ ಸಭಿಕರು ಮನಸೋತು ಹೆಜ್ಜೆಹಾಕಿದರು.

ಪ್ರತಿಕ್ರಿಯಿಸಿ (+)