ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದಲ್ಲೇ ಸಾವಿನ ಪ್ರಮಾಣ ಹೆಚ್ಚಳ

Last Updated 6 ಜುಲೈ 2017, 20:00 IST
ಅಕ್ಷರ ಗಾತ್ರ

ನವದೆಹಲಿ: ಆತ್ಮಹತ್ಯೆ ಸೇರಿದಂತೆ ಸ್ವಯಂಕೃತ ಗಾಯಗಳು, ರಸ್ತೆ ಅಪಘಾತಗಳಲ್ಲಿ ಗಾಯ ಮತ್ತು ಹಿಂಸಾಚಾರಗಳಿಂದಾಗಿ ದೇಶದ ಹದಿಹರೆಯದವರು (10ರಿಂದ 19ವರ್ಷ) ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಎರಡು ದಶಕಗಳ ಅವಧಿಯಲ್ಲಿ ತರುಣ–ತರುಣಿಯರು ಜೀವ ಕಳೆದುಕೊಂಡ ಪ್ರಕರಣಗಳನ್ನು ಈ ಅಧ್ಯಯನದಲ್ಲಿ ವಿಶ್ಲೇಷಿಸಲಾಗಿದೆ.

ದೇಶದಲ್ಲಿರುವ ಹದಿಹರೆಯದವರ (10ರಿಂದ 19 ವರ್ಷದವರು) ಸಂಖ್ಯೆ 25.32 ಕೋಟಿ

23 ವರ್ಷ ಅಧ್ಯಯನ ನಡೆದ ಅವಧಿ (1990–2013)

ಎರಡು ವಿಭಾಗ
ಅಧ್ಯಯನದಲ್ಲಿ ಹದಿ ಹರೆಯದವರನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.
1). 10ರಿಂದ 14 ವರ್ಷದವರು
2). 15ರಿಂದ 19 ವರ್ಷದವರು



ಭಾರಿ ಹೆಚ್ಚಳ
10ರಿಂದ 14 ವರ್ಷದ ಬಾಲಕ–ಬಾಲಕಿಯರು ಸ್ವತಃ ಹಾನಿ ಮಾಡಿಕೊಂಡು ಸಾವು ತಂದುಕೊಂಡ ಪ್ರಮಾಣ 23 ವರ್ಷಗಳ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.

ಗಂಡು ಮಕ್ಕಳಲ್ಲಿ ಹೆಚ್ಚಾದ ಸಾವಿನ ಪ್ರಮಾಣ 105%

ಹೆಣ್ಣು ಮಕ್ಕಳಲ್ಲಿ ಏರಿಕೆಯಾದ ಸಾವಿನ ಪ್ರಮಾಣ 87%

ಅಧ್ಯಯನಕಾರರ ಮಾತು
* ಸ್ವಯಂಕೃತವಾಗಿ ಸಾವು ತಂದುಕೊಂಡ ಪ್ರಕರಣಗಳಲ್ಲಿ ಹೆಚ್ಚಿನವು  ಆತ್ಮಹತ್ಯೆಗಳು

* ರಸ್ತೆ ಅಪಘಾತಗಳಲ್ಲಿ ಗಾಯಗೊಂಡು ಸಂಭವಿಸಿರುವ ಸಾವುಗಳು ಅಪಾಯಕಾರಿ ಬೈಕ್‌ ಸವಾರಿಯ ಹುಚ್ಚಿನಿಂದಾಗಿರುವಂತಹವು

ಹದಿಹರೆಯ... ಇರಲಿ ಎಚ್ಚರ...
*ಈ ವಯಸ್ಸಿನಲ್ಲಿ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಕ್ಷಿಪ್ರ ಬೆಳವಣಿಗೆ ಹೊಂದುತ್ತಾರೆ. ಇದು ಅವರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ.

* ಅನಾರೋಗ್ಯಕರ ಚಟುವಟಿಕೆಗಳಲ್ಲಿ ತೊಡಗುವ ವಯಸ್ಸು

* ಬೇಕಾಬಿಟ್ಟಿ ಆಹಾರ ಸೇವಿಸುವ ಪ್ರವೃತ್ತಿಯಿಂದಾಗಿ ಆರೋಗ್ಯದ ಮೇಲೂ ಪರಿಣಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT