ಗುರುವಾರ , ಡಿಸೆಂಬರ್ 12, 2019
17 °C

ಅಮೆರಿಕಕ್ಕೆ ತೆರಳಲು ಮಹೇಂದ್ರ ಜೈನ್‌ಗೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕಕ್ಕೆ ತೆರಳಲು ಮಹೇಂದ್ರ ಜೈನ್‌ಗೆ ಅನುಮತಿ

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್‌ ಅಮೆರಿಕಕ್ಕೆ ತೆರಳಲು ಹೈಕೋರ್ಟ್ ಅನುಮತಿ ನೀಡಿದೆ.

‘ಮೈಸೂರು ಮಿನರಲ್ಸ್ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ (ಎಂ.ಡಿ) ಅವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ₹ ಅಂದಾಜು 300 ಕೋಟಿ ನಷ್ಟ ಉಂಟಾಗಲು ಕಾರಣಕರ್ತರಾಗಿದ್ದಾರೆ’ ಎಂದು ಲೋಕಾಯುಕ್ತ ವಿಶೇಷ ತನಿಖಾ ತಂಡ  (ಎಸ್‌ಐಟಿ) ದಾಖಲಿಸಿರುವ ಪ್ರಕರಣದಲ್ಲಿ ಮಹೇಂದ್ರ ಜೈನ್‌ ಆರೋಪಿಯಾಗಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ಸದ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಾಕಿ ಇದೆ. ಈ ಪ್ರಕರಣದಲ್ಲಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ್ದ ನ್ಯಾಯಪೀಠ, ‘ಮಹೇಂದ್ರ ಜೈನ್‌ ನಗರ ಬಿಟ್ಟು ತೆರಳಬಾರದು’ ಎಂದು ನಿರ್ದೇಶಿಸಿತ್ತು.

‘ಅಮೆರಿಕದಲ್ಲಿ ನಡೆಯಲಿರುವ ತರಬೇತಿ ಕಾರ್ಯಕ್ರಮವೊಂದರಲ್ಲಿ ನಾನು ಪಾಲ್ಗೊಳ್ಳಬೇಕಿದೆ. ಆದ್ದರಿಂದ ಎರಡು ವಾರಗಳ ಕಾಲ ಅಲ್ಲಿಗೆ

ತೆರಳಲು ಅನುಮತಿ ನೀಡಿ’ ಎಂದು ಜೈನ್‌ ಕೋರಿದ್ದರು.

ಪ್ರತಿಕ್ರಿಯಿಸಿ (+)