ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕಾಲೇಜು ವೇಳೆ ಬದಲು

ಬೆಳಿಗ್ಗೆ 10ರ ಬದಲಾಗಿ 8 ಗಂಟೆಗೆ ತರಗತಿಗಳು ಆರಂಭ
Last Updated 6 ಜುಲೈ 2017, 20:20 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಮಯ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಬೆಳಿಗ್ಗೆ 10ರ ಬದಲಾಗಿ 8 ಗಂಟೆಗೆ ಆರಂಭವಾಗಲಿವೆ.

ಆಡಳಿತಾತ್ಮಕ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಗತಿಗಳನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 3.30ರವರೆಗೆ ನಡೆಸಬೇಕು. ಕಾಲೇಜುಗಳಲ್ಲಿರುವ ಗ್ರಂಥಾಲಯವನ್ನು  ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ತೆರೆದಿರಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಕಮಿಷನರ್‌ ಎಂ.ಎನ್‌. ಅಜಯ್‌ನಾಗಭೂಷಣ್‌ ಗುರುವಾರ ಸುತ್ತೋಲೆ ಹೊರಡಿಸಿದ್ದಾರೆ.

‘412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 94 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕೆಲವು ಕೋರ್ಸ್‌ಗಳಿಗೆ ಬೆಳಿಗ್ಗೆ, ಇನ್ನೂ  ಕೆಲವು ಕೋರ್ಸ್‌ಗಳಿಗೆ ಮಧ್ಯಾಹ್ನ ತರಗತಿ ನಡೆಸಲಾಗುತ್ತದೆ. ಅಂತಹ   ಕಾಲೇಜುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು  ಸ್ಪಷ್ಟಪಡಿಸಿದ್ದಾರೆ.

‘ಮಧ್ಯಾಹ್ನ ತರಗತಿಗಳು ಮುಗಿದರೆ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಕಂಪ್ಯೂಟರ್ ಕೋರ್ಸ್‌, ಭಾಷಾ ಕಲಿಕೆ,  ಕೌಶಲ ತರಬೇತಿ ಕೋರ್ಸ್‌ ಸೇರಲು ಸಮಯ ಸಿಗುತ್ತದೆ. ಇಲ್ಲದಿದ್ದರೆ ಮನೆಯಲ್ಲಿ ಕುಳಿತು ಓದುವುದಕ್ಕಾದರೂ ಸಮಯ ದೊರೆಯುತ್ತದೆ. ಹೀಗಾಗಿ ಸಮಯ ಬದಲಾವಣೆ ಮಾಡಲಾಗಿದೆ’ ಎಂದು ಆಯುಕ್ತರು ಹೇಳಿದರು.
*
ಸಮಯ ಬದಲಾವಣೆಯಿಂದ ಉಪನ್ಯಾಸಕರಿಗೆ ಸಮಸ್ಯೆ ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದರಿಂದ ಹಾಜರಾತಿ ಕುಸಿಯುವ ಆತಂಕವಿದೆ.
ಡಾ.ಎಚ್. ಪ್ರಕಾಶ್,
ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ
*
ನಾನು ಯಲಹಂಕದಿಂದ ಹೋಗುತ್ತೇನೆ. ನನ್ನ ಸ್ನೇಹಿತರು ಕೋಲಾರ, ಮಾಲೂರಿನಿಂದ ರೈಲಿನಲ್ಲಿ ಬರುತ್ತಾರೆ. ಸಮಯ ಬದಲಾವಣೆ ಮಾಡಿದರೆ ಸಮಸ್ಯೆಯಾಗುತ್ತದೆ.
ದರ್ಶನ್
ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT