ಮಂಗಳವಾರ, ಡಿಸೆಂಬರ್ 10, 2019
17 °C
ಜಿ20 ಶೃಂಗ ಸಭೆಯಲ್ಲಿ ಪ್ರತ್ಯೇಕ ಮಾತುಕತೆ ನಡೆಸದಿರಲು ನಿರ್ಧಾರ

ಕ್ಸಿ –ಮೋದಿ ಮಧ್ಯೆ ಮಾತಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ಕ್ಸಿ –ಮೋದಿ ಮಧ್ಯೆ ಮಾತಿಲ್ಲ

ನವದೆಹಲಿ/ಬೀಜಿಂಗ್‌: ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಶುಕ್ರವಾರ ಆರಂಭವಾಗಲಿರುವ ಜಿ20 ಶೃಂಗ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.ಈ ಇಬ್ಬರು ಮುಖಂಡರ ನಡುವೆ ಮಾತುಕತೆ ನಿಗದಿಯಾಗಿಲ್ಲ. ಇಂತಹ ಮಾತುಕತೆಗೆ ಬೇಕಾಗಿರುವ ವಾತಾವರಣ ಇಲ್ಲ ಎಂದು ಚೀನಾ ಕೂಡ ಹೇಳಿದೆ. ಸಿಕ್ಕಿಂ ವಲಯದ ಭಾರತ–ಚೀನಾ ಗಡಿಯಲ್ಲಿ ಸಂಘರ್ಷಭರಿತವಾದ ಸನ್ನಿವೇಶ ಇದೆ. ಮಾತುಕತೆ ನಡೆಸದಿರಲು ಇದುವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.ಸಿಕ್ಕಿಂ ವಲಯದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಕೆಟ್ಟು ಹೋಗಲಿದೆ ಎಂದು ಚೀನಾ ಹೇಳಿದೆ.ಜಿ20 ಶೃಂಗ ಸಭೆ ಶುಕ್ರವಾರ ಆರಂಭವಾಗಲಿದೆ. ಈ ವೇಳೆ, ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಮುಖಂಡರ ಸಭೆ ನಡೆಯಲಿದೆ.* ಅರ್ಜೆಂಟೀನಾ, ಕೆನಡಾ, ಇಟಲಿ, ಜಪಾನ್‌, ಮೆಕ್ಸಿಕೊ, ರಿಪಬ್ಲಿಕ್‌ ಆಫ್‌ ಕೊರಿಯ, ಬ್ರಿಟನ್‌ ಮತ್ತು ವಿಯೆಟ್ನಾಂ ಮುಖಂಡರ ಜತೆ ಪ್ರಧಾನಿ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

* ಭಯೋತ್ಪಾದನೆ ವಿರುದ್ಧ ಹೋರಾಟ, ಹವಾಮಾನ ವೈಪರೀತ್ಯ ತಡೆಗೆ ಕ್ರಮಗಳು ಮತ್ತು ಜಾಗತಿಕ ವ್ಯಾಪಾರ ಜಿ20 ಸಭೆಯ ಚರ್ಚೆಯ ಮುಖ್ಯ ವಿಚಾರಗಳು

ಪ್ರತಿಕ್ರಿಯಿಸಿ (+)