ಭಾನುವಾರ, ಡಿಸೆಂಬರ್ 8, 2019
21 °C

ಜೂನಿಯರ್‌ ಎನ್‌ಟಿಆರ್‌ ಅಭಿನಯದ ‘ಜೈ ಲವ ಕುಶ’ ಟೀಸರ್‌ ಬಿಡುಗಡೆ

Published:
Updated:
ಜೂನಿಯರ್‌ ಎನ್‌ಟಿಆರ್‌ ಅಭಿನಯದ ‘ಜೈ ಲವ ಕುಶ’ ಟೀಸರ್‌ ಬಿಡುಗಡೆ

ಹೈದರಾಬಾದ್‌: ಟೆಂಪರ್, ನಾನ್ನಕೂ ಪ್ರೇಮತೋ ಮತ್ತು ಜನತಾ ಗ್ಯಾರೇಜ್‌ ನಂತರದ ಮಹತ್ವದ ಚಿತ್ರ ಇದು ಎಂದೇ ಎನ್‌ಟಿಆರ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಟಾಲಿವುಡ್‌ನ ಜನಪ್ರಿಯ ನಟ ಜೂನಿಯರ್ ಎನ್‌ಟಿಆರ್ ರಾಮನವಮಿಯಂದೇ ತಮ್ಮ ಹೊಸ ಚಿತ್ರ ‘ಜೈ ಲವ ಕುಶ’ದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದರು.

ಚಿತ್ರದಲ್ಲಿ ಜೂ.ಎನ್‌ಟಿಆರ್ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಶಿಖನ್ನಾ ಮತ್ತು ಸಮಂತಾ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರವನ್ನು ಕೆ.ಎಸ್‌. ರವೀಂದ್ರ ನಿರ್ದೇಶಿಸುತ್ತಿದ್ದು, ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಜೂ. ಎನ್‌ಟಿಆರ್ ಸಹೋದರ ನಂದಮುರಿ ಕಲ್ಯಾಣ ರಾಮ್ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ.


45 ಸೆಕೆಂಡ್‌ ಇರುವ ಟೀಸರ್‌ ಜುಲೈ 6ರಂದು ಬಿಡುಗಡೆ ಮಾಡಲಾಗಿದ್ದು, ಈವರೆಗೆ ಯೂಟ್ಯೂಬ್‌ನಲ್ಲಿ 41 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಪ್ರತಿಕ್ರಿಯಿಸಿ (+)