ಶುಕ್ರವಾರ, ಡಿಸೆಂಬರ್ 13, 2019
17 °C

ಕಾರು ಅಪಘಾತದಲ್ಲಿ ರೂಪದರ್ಶಿ ಸೋನಿಕಾ ಸಾವು: ನಟ ವಿಕ್ರಮ್‌ ಚಟರ್ಜಿ ಬಂಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾರು ಅಪಘಾತದಲ್ಲಿ ರೂಪದರ್ಶಿ ಸೋನಿಕಾ ಸಾವು: ನಟ ವಿಕ್ರಮ್‌ ಚಟರ್ಜಿ ಬಂಧನ

ಕೋಲ್ಕತ್ತ: ರೂಪದರ್ಶಿ ಹಾಗೂ ಟಿ.ವಿ ಕಾರ್ಯಕ್ರಮ ನಿರೂಪಕಿ ಸೋನಿಕಾ(27), ನಟ ವಿಕ್ರಮ್‌ ಚಟರ್ಜಿ ಪ್ರಯಾಣಿಸುತ್ತಿದ ಕಾರು ಅಪಘಾತಕ್ಕಿಡಾಗಿದ್ದು  ಸೋನಿಕಾ ಸ್ಥಳದಲ್ಲೇ ಮೃತ್ತಪಟ್ಟಿದ್ದಾರೆ. ಈ ಸಂಬಂಧ ಪೊಲೀಸರು ವಿಕ್ರಮ್‌ ಚಟರ್ಜಿ ಅವರನ್ನು ಬಂಧಿಸಿದ್ದಾರೆ.

ಏಪ್ರಿಲ್‌ 29ರ ಬೆಳಗಿನ ಜಾವ 3.30ರ ಸುಮಾರಿಗೆ ಪಾರ್ಟಿ ಮುಗಿಸಿಕೊಂಡು ಮನೆಗೆ ಮರಳುವಾಗ ಅಪಘಾತ ಸಂಭವಿಸಿದ್ದು, ತಕ್ಷಣ ಸೋನಿಕಾ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ್ತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.

ಅತಿ ವೇಗ ಮತ್ತು ನಿರ್ಲಕ್ಷದಿಂದ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದ್ದು, ಐಪಿಸಿ ಸೇಕ್ಷನ್‌ 304ರ ಅಡಿಯಲ್ಲಿ ವಿಕ್ರಮ್‌ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಿಕೊಂಡ ಕೋಲ್ಕತ್ತ ಪೊಲೀಸರು ಶುಕ್ರವಾರ ವಿಕ್ರಮ್‌ ಚಟರ್ಜಿ ಅವರನ್ನು ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)