ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂಮಿ ಹಸ್ತಾಂತರ ಬಳಿಕ ಟೆಂಡರ್’

Last Updated 7 ಜುಲೈ 2017, 9:00 IST
ಅಕ್ಷರ ಗಾತ್ರ

ಸುಳ್ಯ: 110 ಕೆ.ವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಇದ್ದ ಕಾನೂನು ತೊಡಕುಗಳು ನಿವಾರಣೆಯಾಗಿದ್ದು, ಅರಣ್ಯ ಇಲಾಖೆ ಅನುಮತಿ ದೊರೆಯಬೇಕಿದೆ. ಇಲಾಖೆಗೆ ಸೇರಬೇಕಾದ 25 ಎಕರೆ ಭೂಮಿ ಹಸ್ತಾಂತರ ಮಾಡಿದ ಬಳಿಕ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗು ವುದು ಎಂದು ಕೆಪಿಟಿಸಿಎಲ್ ಅಧೀಕ್ಷಕ ಎಂಜಿನಿಯರ್ ರವಿಕಾಂತ್ ಕಾಮತ್ ಹೇಳಿದರು.

ಸುಳ್ಯ ಮೆಸ್ಕಾಂ ಕಚೇರಿಯಲ್ಲಿ ಗುರುವಾರ ನಡೆದ ಸುಳ್ಯ ತಾಲ್ಲೂಕು ಮತ್ತು ಉಪ ವಿಭಾಗಗಳ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಕೆಪಿಟಿಸಿಎಲ್ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಬಸವರಾಜ್ ಮಾತನಾಡಿ, ‘ಜಿಲ್ಲಾಧಿಕಾರಿ ಕೋರ್ಟ್‌ನ ಲ್ಲಿದ್ದ ಕಾನೂನು ತೊಡಕು ನಿವಾರ ಣೆಯಾಗಿದ್ದು, ವಿದ್ಯುತ್ ಲೈನ್ ಬರುವ ಪ್ರದೇಶಗಳ ಸರ್ವೇ ಮುಗಿದಿದೆ.

ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಮುಖ್ಯ ಕಚೇರಿಗೆ ಕಳೆದ ಮಾರ್ಚ್‌ ತಿಂಗಳಲ್ಲಿ ನೀಡಿದ್ದು, ಇಲಾಖೆ ಪರಿಶೀಲನೆ ನಡೆಸಿ 6.7ಎಕರೆಗೆ ಬದಲಾಗಿ 25 ಎಕರೆ ಸರ್ಕಾರಿ ಅಥವಾ ಖಾಸಗಿ ಭೂಮಿಯನ್ನು ಕೆಪಿಟಿಸಿಎಲ್‌ನಿಂದ ನೀಡಬೇಕಿದೆ. ಈ ಜಾಗ ಯಾವ ಪ್ರದೇಶದಲ್ಲಿದ್ದರೂ ತೊಂದರೆ ಇಲ್ಲ. ಈ ಬಗ್ಗೆ ಸುಳ್ಯ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದೇವೆ’ ಎಂದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ನಂದಿಕೂರುನಿಂದ ಹಾಸನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ 400 ಎಕರೆ ಜಾಗ ಗುರುತಿಸಿದ್ದೇವೆ. ಅದರಲ್ಲಿ ಸ್ವಲ್ಪ ಜಾಗ ಉಳಿದಿದ್ದು, ಅಲ್ಲಿಂದ ಅನುಮೋದನೆ ಸಿಕ್ಕಿದರೆ, ಈ ಉಪಕೇಂದ್ರಕ್ಕೆ ಭೂಮಿ ಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುತ್ತೇವೆ. ಅರಣ್ಯ ಇಲಾಖೆಯ ಒಪ್ಪಿಗೆ ಸಿಕ್ಕಿದ ಕೂಡಲೇ ಯೋಜನೆಗೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ಸುಳ್ಯದ ಕೊಡಿಯಲಬೈಲು ಬಿಸಿಎಂ ಹಾಸ್ಟೇಲ್ ಸಮೀಪ ಎಚ್.ಟಿ. ಲೈನ್ ಹಾದು ಹೋಗಿದ್ದು, ಇದನ್ನು ತೆರವು ಗೊಳಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಹಲವು ಬಾರಿ ನಿರ್ಣಯ ಮಾಡಿದೆ. ಆದರೂ ಇಲ್ಲಿಯವರೆಗೆ ಅದನ್ನು ತೆರೆಯುವ ಕೆಲಸ ಮಾಡಿಲ್ಲ ಎಂದು ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು.

ಸಂಪಾಜೆಯಲ್ಲಿ ಸಮಸ್ಯೆ: ಸಂಪಾಜೆಯಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಸಮಸ್ಯೆ ಇದ್ದು, ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ. 33ಕೆ.ವಿ ಸಬ್‌ಸ್ಟೇಷನ್ ಮಂಜೂರಾಗಿದೆ. ವೋಲ್ಟೇಜ್ ಸಮಸ್ಯೆ ಇದ್ದು, ಹೆಚ್ಚುವರಿ ಲೈನ್‌ಮ್ಯಾನ್ ಮತ್ತು ಅವರಿಗೆ ಸಂಚಾರಿಸಲು ಜೀಪ್‌ನ ಅಗತ್ಯ ಇದೆ ಎಂದು ಎಸ್.ಕೆ. ಹನೀಫ್ ಹೇಳಿದರು.

ಸಂಪಾಜೆಗೆ ವಿದ್ಯುತ್ ಸಂಪರ್ಕದಲ್ಲಿ ಕೊಡಗಿನ ಕೆಲವು ಪ್ರದೇಶಗಳಿಗೆ ಸಂ ಪರ್ಕ ಇರುವುದರಿಂದ ಸಮಸ್ಯೆ ಆಗುತ್ತಿದೆ ಸುಳ್ಯ ಮೆಸ್ಕಾಂ ಎಂಜಿನಿಯರ್  ಹೇಳಿ ದರು. ಸುಳ್ಯ ಮೆಸ್ಕಾಂ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ದಿವಾಕರ್, ಸಹಾಯಕ ಎಂಜಿನಿಯರ್ ಹರೀಶ್ ನಾಯ್ಕ, ಗುತ್ತಿಗಾರು ಎಂಜಿನಿ ಯರ್ ಬೋರಯ್ಯ, ಸ್ಥಳೀಯರಾದ ಬಾಪು ಸಾಹೇಬ್, ರಾಧಾಕೃಷ್ಣ ಪರಿವಾರಕಾನ, ಸೂರಜ್ ಕೆ.ಎಸ್, ಮೆಸ್ಕಾಂ ಅಧಿಕಾರಿಗಳು ಇದ್ದರು.

ಜಾಲ್ಸೂರಿನಲ್ಲಿ ಕಚೇರಿ
ಜಾಲ್ಸೂರುನಲ್ಲಿ ವಿದ್ಯುತ್ ಕೇಂದ್ರದ ಕಚೇರಿ ಮಂಜೂರಾ ಗಿದ್ದು, ಇಲ್ಲಿಯವರೆಗೆ ಆರಂಭ ಗೊಂಡಿಲ್ಲ. ಕೂಡಲೇ ಕಚೇರಿ ತೆರೆಯಬೇಕು ಎಂದು ಕನಕಮ ಜಲಿನ ಕೆ. ಪದ್ಮನಾಭ ಭಟ್ ಒತ್ತಾಯಿಸಿದರು. ಮೆಸ್ಕಾಂ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಮಂಜಪ್ಪ ಮಾತನಾಡಿ, ಕಚೇರಿಯನ್ನು ಕೂಡಲೇ ತೆರಯುವಂತೆ ಸೂಚನೆ ನೀಡಿದರು.

ಜಾಲ್ಸೂರಿನಿಂದ ಮೂರೂರು ಮೂಲಕ ಮಂಡೆಕೋಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗ, ಕೆಲವರ ಖಾಸಗಿ ಜಮೀನಿನಲ್ಲಿ ಹೋಗಿದೆ. ಇದರಿಂದ ಸಾರ್ವಜ ನಿಕರಿಗೆ ಸಮಸ್ಯೆಯಾ ಗುತ್ತಿದೆ. ಅಲ್ಲಿಂದ ತೆರವುಗೊಳಿಸಿ ರಸ್ತೆ ಬದಿ ಗೆ ತಂದು ಹಾಕಬೇಕು ಎಂದು ಚಂದ್ರಜಿತ್ ಮನವಿ ಮಾಡಿದರು.

* * 

ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಯಾವ ಮನೆಯನ್ನು ಬಿಡದೇ ಸರ್ವೇ ನಡೆಸಿ   ದೀನ್ ದಯಳ್ ವಿದ್ಯುದೀಕರಣ ಯೋಜನೆಯಡಿ ಸಂಪರ್ಕ ಕಲ್ಪಿಸಬೇಕು
ಮಂಜಪ್ಪ. ಟಿ , ಜಿಲ್ಲಾ ಅಧೀಕ್ಷಕ ಎಂಜಿನಿಯರ್, ಮೆಸ್ಕಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT