ಸೋಮವಾರ, ಡಿಸೆಂಬರ್ 16, 2019
18 °C

36ರ ವಸಂತಕ್ಕೆ ಕಾಲಿಟ್ಟ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌.ದೋನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

36ರ ವಸಂತಕ್ಕೆ ಕಾಲಿಟ್ಟ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌.ದೋನಿ

ಕಿಂಗ್ಸ್‌ಟನ್‌: ಟೀಂ ಇಂಡಿಯಾದ ಕ್ಯಾಪ್ಟನ್‌ ಕೂಲ್‌ ಎಂದೇ ಹೆಸರಾಗಿರುವ ಎಂ.ಎಸ್‌.ದೋನಿ ಶುಕ್ರವಾರ 36ರ ವಸಂತಕ್ಕೆ ಕಾಲಿಟ್ಟಿದ್ದಾರೆ. ದೋನಿಯ ಹುಟ್ಟುಹಬ್ಬದ ಪ್ರಯುಕ್ತ ಟೀಂ ಇಂಡಿಯಾದ ಹಿರಿಯ ಆಟಗಾರರು ಶುಭ ಕೋರಿದ್ದಾರೆ.

ಪ್ರಸ್ತುತ ದೋನಿ ವೆಸ್ಟ್‌ ಇಂಡೀಸ್‌ ವಿರುದ್ಧ ಕ್ರಿಕೆಟ್‌ ಸರಣಿಯಲ್ಲಿ ಆಡುತ್ತಿದ್ದಾರೆ. ಗುರುವಾರ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ ಗೆಲುವು ಸಾಧಿಸಿತ್ತು. ಜತೆಗೆ 3–1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು. ಈ ಟೂರ್ನಿಯಲ್ಲಿ ದೋನಿ ವೈಯಕ್ತಿಕವಾಗಿ 154 ರನ್‌ ಸಿಡಿಸಿದ್ದಾರೆ.

‘ಹೆಲಿಕಾಪ್ಟರ್‌ಗೆ(ಎಂ.ಎಸ್‌.ದೋನಿ) ಜನ್ಮ ದಿನದ ಶುಭಾಶಯಗಳು’ ಎಂದು ಯುವರಾಜ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

‘ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಅಸಂಖ್ಯಾತ ಸಂತೋಷದ ಕ್ಷಣಗಳನ್ನು ಉಣಬಡಿಸಿದ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ವಿರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ.

ಜತೆಗೆ, ಬಿಸಿಸಿಐ ಸೇರಿದಂತೆ ಭಾರತದ ಮಹಿಳಾ ಕ್ರಿಕೆಟ್‌ ತಂಡ ನಾಯಕಿ ಮಿಥಾಲಿ ರಾಜ್‌, ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌, ಬಿಸಿಸಿಐ ಅಯ್ಕೆ ಸಮಿತಿಯ(ಸಿಎಸಿ)ಸದಸ್ಯ ವಿವಿಎಸ್‌ ಲಕ್ಷ್ಮಣ್‌, ಆಕಾಶ್‌ ಚೋಪ್ರಾ ಸೇರಿದಂತೆ ಹಿರಿಯ ಆಟಗಾರರು ದೋನಿಗೆ ಶುಭ ಹಾರೈಸಿದ್ದಾರೆ.

ಪ್ರತಿಕ್ರಿಯಿಸಿ (+)