ಶನಿವಾರ, ಡಿಸೆಂಬರ್ 7, 2019
25 °C

ನಾನು ರಾಜಕೀಯಕ್ಕೆ ಬರುವುದಿಲ್ಲ, ಇಷ್ಟವೂ ಇಲ್ಲ: ನಟ ಶಿವರಾಜ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು ರಾಜಕೀಯಕ್ಕೆ ಬರುವುದಿಲ್ಲ, ಇಷ್ಟವೂ ಇಲ್ಲ: ನಟ ಶಿವರಾಜ್ ಕುಮಾರ್

ಹಾಸನ: ‘ನಾನು ರಾಜಕೀಯಕ್ಕೆ ಬರುವುದಿಲ್ಲ. ಅದು ನನಗೆ ಇಷ್ಟ ಇಲ್ಲ’ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.

ಇಲ್ಲಿ ಶುಕ್ರವಾರ ನೂತನ ಕಲ್ಯಾಣ್ ಆಭರಣ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ರಾಜಕೀಯಕ್ಕೆ ಬರುತ್ತೇನೆ ಎಂಬುದು ಸುಳ್ಳು’ ಎಂದು ಸ್ಪಷ್ಟಪಡಿಸಿದ ಶಿವರಾಜ್‌ ಕುಮಾರ್, ‘ರಾಹುಲ್ ಗಾಂಧಿ ನಮ್ಮ ಮನೆಗೆ ಬಂದ ಬಗ್ಗೆ ಗೌರವವಿದೆ’ ಎಂದರು.

ಡಬ್ಬಿಂಗ್ ಸಿನಿಮಾ ಬೇಕೋ ಬೇಡವೊ ಎಂಬುದನ್ನು ಜನರು ತೀರ್ಮಾನಿಸಬೇಕು. ಕಾರ್ಮಿಕರ ಹಿತದೃಷ್ಟಿಯಿಂದ ಡಬ್ಬಿಂಗ್ ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ಶಿವರಾಜ್ ಕುಮಾರ್ ಹೇಳಿದರು.

ಪ್ರತಿಕ್ರಿಯಿಸಿ (+)