ಭಾನುವಾರ, ಡಿಸೆಂಬರ್ 8, 2019
25 °C

ಶೀಘ್ರ ಕೈ ಸೇರಲಿದೆ ಬಿಪಿಎಲ್ ಕಾರ್ಡ್‌

ಎಂ. ನವೀನ್ ಕುಮಾರ್‌ Updated:

ಅಕ್ಷರ ಗಾತ್ರ : | |

ಶೀಘ್ರ ಕೈ ಸೇರಲಿದೆ ಬಿಪಿಎಲ್ ಕಾರ್ಡ್‌

ಉಡುಪಿ: ಪಡಿತರ ಚೀಟಿಗಾಗಿ ಸಲ್ಲಿಸಿದ ಅರ್ಜಿಗಳ ಪೈಕಿ 3,429 ಅರ್ಜಿಗಳನ್ನು ಸ್ಥಳ ಪರಿಶೀಲನೆಗಾಗಿ ನಾಡ ಕಚೇರಿಗಳಿಗೆ ಕಳುಹಿಸಿಕೊಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ ನಂತರ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ.

ಉಡುಪಿ ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಗಾಗಿ ಒಟ್ಟು 8,100 ಅರ್ಜಿಗಳು ಬಂದಿವೆ. ಆದರೆ ಅರ್ಜಿ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿರುವು ದರಿಂದ ಎಲ್ಲ ಅರ್ಜಿಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸಿಲ್ಲ. ಪರಿಶೀಲ ನೆಗೊಂಡು ಕ್ರಮಬದ್ಧವಾಗಿರುವ ಅರ್ಜಿ ಗಳನ್ನು ನಾಡಾ ಕಚೇರಿ ಮೂಲಕ ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಕಳುಹಿಸಿಕೊಡಲಾಗಿದೆ.

‘ಸ್ಥಳ ಪರಿಶೀಲನೆ ನಡೆಸಿ ಅರ್ಜಿಯಲ್ಲಿ ನಮೂದಿಸಿರುವ ವಿಷಯಗಳು ಸತ್ಯ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ಮತ್ತೆ ಆ ಅರ್ಜಿಗಳನ್ನು ಆಹಾರ ನಿರೀಕ್ಷಕರಿಗೆ ಕಳುಹಿಸಿಕೊಡಲಾಗುತ್ತದೆ. ಅವರು ಪರಿಶೀಲಿಸಿ ಸರಿ ಇದ್ದರೆ ಅದನ್ನು ಕೇಂದ್ರೀಕೃತ ವ್ಯವಸ್ಥೆಗೆ  ಕಳುಹಿಸಿಕೊಡು ತ್ತಾರೆ. ಅಲ್ಲಿ ಪ್ರಿಂಟ್ ಮಾಡಿ ಅರ್ಜಿ ದಾರರು ಆಧಾರ್‌ನಲ್ಲಿ ನಮೂದಿಸಿರುವ ವಿಳಾಸಕ್ಕೆ ಪೋಸ್ಟ್‌ ಮೂಲಕ ಕಳುಹಿಸಲಾಗುತ್ತದೆ. ಆದರೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರ್ಜಿಗಳ ಪರಿಶೀಲನೆ ಇನ್ನೂ ಆಗಿಲ್ಲ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿ ಹೇಳುತ್ತಾರೆ.

‘ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಪಡಿತರ ಚೀಟಿ ವಿತರಣೆ ಮಾಡುತ್ತಿರುವುದರಿಂದ ವಿಳಂಬ ಆಗುತ್ತಿದೆ. ಎಪಿಎಲ್ ಪಡಿತರ ಚೀಟಿಗಾಗಿ 3,164 ಅರ್ಜಿಗಳು ಬಂದಿದ್ದವು, ಅವುಗಳಲ್ಲಿ 2,889 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ’ ಎನ್ನುತ್ತಾರೆ ಅವರು.

ಪಡಿತರ ಚೀಟಿ ವಿತರಣೆ ವಿಳಂಬ ಆಗುತ್ತಿದೆ ಎಂದು ಸ್ಥಳೀಯ ಜನ ಪ್ರತಿನಿಧಿಗಳು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸಭೆಗಳಲ್ಲಿ ಆರೋಪಿಸಿದ್ದರು. ಪಡಿತರ ಚೀಟಿ ಇಲ್ಲದ ಕಾರಣ ಬಡವರು ಉಚಿತ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ, ಸರ್ಕಾರದ ಬೇರೆ ಸೌಲಭ್ಯಗಳನ್ನು ಸಹ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.  ಆದ್ದರಿಂದ ಕೂಡಲೇ ಪಡಿತರ ಚೀಟಿ ನೀಡುವಂತೆ ಒತ್ತಾಯಿಸಿದ್ದರು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ:

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಇಲಾಖೆಯ ವೆಬ್‌ಸೈಟ್‌ ahara.kar.nic.in ಪ್ರವೇಶಿಸಿ ಮೊದಲು ಇ ಸರ್ವೀಸ್ ಮೆನು ಮೇಲೆ ಕ್ಲಿಕ್ ಮಾಡಿ. ಆ ನಂತರ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಆಯ್ಕೆಯನ್ನು ಮೆನು ತೆರೆದುಕೊಳ್ಳುತ್ತದೆ.

ಅನುಕೂಲಕರವಾದುದ್ದನ್ನು ಕ್ಲಿಕ್ ಮಾಡಿ. ಹೊಸ ಪರಿತರ ಚೀಟಿಗಾಗಿ ಅರ್ಜಿ ಮೇಲೆ ಕ್ಲಿಕ್ ಮಾಡಿ ಆ ನಂತರ ಆಧಾರ್ ಕಾರ್ಡ್‌ ಸಂಖ್ಯೆಯನ್ನು ನಮೂದಿಸಿ. ಬಿಪಿಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೆ ಜೈವಿಕ ಗುರುತು (ಹೆಬ್ಬೆಟ್ಟು ಅಥವಾ ಕಣ್ಣಿನ ಪಾಪೆ) ನೀಡಬೇಕು. ಎಪಿಲ್ ಕಾರ್ಡ್‌ದಾರರು ತಮ್ಮ ಮೊಬೈಲ್ ಫೋನ್‌ಗೆ ಬರುವ ಒಟಿಪಿ ಸಂಖ್ಯೆಯನ್ನು ನಮೂದಿಸಬೇಕು. ಹೀಗೆ ಮಾಡಿದರೆ ಅರ್ಜಿ ಸಲ್ಲಿಕೆಯಾಗುತ್ತದೆ.

* * 

ಸ್ಥಳ ಪರಿಶೀಲನೆ ಮುಗಿದು ವರದಿ ನೀಡಿದ ಕೆಲವೇ ದಿನಗಳಲ್ಲಿ ಪಡಿತರ ಚೀಟಿಯನ್ನು ಅರ್ಜಿದಾರರ ವಿಳಾಸಕ್ಕೆ ಕಳುಹಿಸಿಕೊಡಲಾಗುತ್ತದೆ.

ಸದಾಶಿವಪ್ಪ, ಆಹಾರ ಇಲಾಖೆ ಉಪ ನಿರ್ದೇಶಕ

ಪ್ರತಿಕ್ರಿಯಿಸಿ (+)