ಸೋಮವಾರ, ಡಿಸೆಂಬರ್ 16, 2019
25 °C

ಒಂದೇ ಪಂದ್ಯದಲ್ಲಿ ಹಲವು ಹೊಸ ದಾಖಲೆ ಬರೆದ ವಿರಾಟ್‌ ಕೊಹ್ಲಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಒಂದೇ ಪಂದ್ಯದಲ್ಲಿ ಹಲವು ಹೊಸ ದಾಖಲೆ ಬರೆದ ವಿರಾಟ್‌ ಕೊಹ್ಲಿ

ಕಿಂಗ್ಸ್‌ಟನ್‌: ವೆಸ್ಟ್‌ಇಂಡೀಸ್‌ ವಿರುದ್ಧದ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಶತಕಗಳಿಸುವ ಮೂಲಕ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ವೆಸ್ಟ್‌ಇಂಡೀಸ್‌ ತಂಡ ನಿಗದಿತ 50 ಓವರ್‌ಗಳಲ್ಲಿ 205 ರನ್‌ ಗಳಿಸಿತ್ತು. ಭಾರತ ಕೇವಲ 36.2ಓವರ್‌ಗಳಲ್ಲಿ ಈ ಸಾಧಾರಣ ಗುರಿಯನ್ನು ತಲುಪಿ 8ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು.

ಈ ಜಯದೊಂದಿಗೆ ಭಾರತ ಸರಣಿಯನ್ನು 3–1ರಿಂದ ಗೆದ್ದುಕೊಂದ್ದು, ಪಂದ್ಯದಲ್ಲಿ ವಿರಾಟ್‌ 115 ಎಸೆತಗಳಲ್ಲಿ 111 ರನ್‌ ಗಳಿಸಿ ಮಿಂಚಿದ್ದರು. ಈ ಮೂಲಕ ಹಲವು ದಾಖಲೆಗಳನ್ನು ವಿರಾಟ್‌ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಸಚಿನ್‌ ದಾಖಲೆ ಮುರಿದ ವಿರಾಟ್‌

ಈ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ವಿರಾಟ್‌, ತಂಡ ಗುರಿ ತಲುಪುವ(ಚೇಸಿಂಗ್‌) ವೇಳೆ ಅತಿಹೆಚ್ಚು ಶತಕ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿತ್ತು. ತಂಡ ಗುರಿ ತಲುಪುವ ವೇಳೆ ವಿರಾಟ್‌ ಗಳಿಸಿದ 18ನೇ ಶತಕ ಇದಾಗಿದ್ದು, ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ ಈ ಸಾಧನೆ ಮಾಡಿಲ್ಲ.

17 ಶತಕ ಗಳಿಸಿರುವ ಸಚಿನ್‌ ಎರಡನೇ ಸ್ಥಾನದಲ್ಲಿದ್ದಾರೆ. ಇಷ್ಟು ಶತಕ ಗಳಿಸಲು ಅವರು 232 ಇನಿಂಗ್ಸ್‌ ತೆಗೆದುಕೊಂಡಿದ್ದರು. ವಿರಾಟ್‌ ಕೇವಲ 102 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

ಅತಿಹೆಚ್ಚು ಶತಕಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ

ಶತಕ ಗಳಿಕೆಯಲ್ಲಿ ವೇಗ ಕಾಯ್ದುಕೊಂಡಿರುವ ವಿರಾಟ್‌ ಸದ್ಯ ಏಕದಿನ ಮಾದರಿಯಲ್ಲಿ 28 ಶತಕ ಗಳಿಸಿದ್ದು, ಈ ಮೂಲಕ ಅತಿಹೆಚ್ಚು ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಸನತ್‌ ಜಯಸೂರ್ಯ ಅವರ ಜತೆಗೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ಅತಿಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ಸಚಿನ್‌(49 ಶತಕ) ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌(30 ಶತಕ) ಎರಡನೇ ಸ್ಥಾನದಲ್ಲಿದ್ದಾರೆ.

ವಿಂಡೀಸ್‌ ವಿರುದ್ಧ 2 ಶತಕ ಗಳಿಸಿದ ಮೊದಲ ಭಾರತ ತಂಡದ ನಾಯಕ

ಈಗಾಗಲೇ ವಿಂಡೀಸ್‌ ವಿರುದ್ಧ ಒಟ್ಟು ನಾಲ್ಕು ಶತಕ ಗಳಿಸಿರುವ ವಿರಾಟ್‌ ನಾಯಕನಾಗಿ ಕೆರಿಬಿಯನ್ ನೆಲದಲ್ಲಿ ವಿಂಡೀಸ್‌ ವಿರುದ್ಧ ಎರಡು ಶತಕ ಗಳಿಸಿದ ಸಾಧನೆ ಮಾಡಿದ್ದಾರೆ. ಭಾರತ ತಂಡದ ನಾಯಕನಾಗಿ ಈ ಸಾಧನೆ ಮಾಡಿರುವುದು ವಿರಾಟ್‌ ಕೊಹ್ಲಿ ಮಾತ್ರ. ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಒಂದು ಶತಕ ಗಳಿಸಿದ್ದಾರೆ.

ಪ್ರತಿಕ್ರಿಯಿಸಿ (+)