ಭಾನುವಾರ, ಡಿಸೆಂಬರ್ 8, 2019
21 °C

ಗೋವಾ ಕಡಲ ತೀರದಲ್ಲಿ ಸಮಂತಾ– ಅಕ್ಕಿನೇನಿ ನಾಗಚೈತನ್ಯ ಮದುವೆ

Published:
Updated:
ಗೋವಾ ಕಡಲ ತೀರದಲ್ಲಿ ಸಮಂತಾ– ಅಕ್ಕಿನೇನಿ ನಾಗಚೈತನ್ಯ ಮದುವೆ

ಹೈದರಾಬಾದ್‌: ನಗರದಲ್ಲಿ ಜ. 29ರಂದು ನಿಶ್ಛಿತಾರ್ಥ ನೆರವೇರಿಸಿಕೊಂಡಿದ ಟಾಲಿವುಡ್‌ನ ನಾಗ ಚೈತನ್ಯ– ಸಮಂತಾ ಜೋಡಿ ಶೀಘ್ರದಲ್ಲಿ ಸಪ್ತಪದಿ ತುಳಿಯುವ ಮುನ್ಸೂಚನೆಯನ್ನು ನೀಡಿದ್ದು, ಅಕ್ಟೋಬರ್‌ 6ರಂದು ‌ಸಮಂತಾ– ನಾಗಚೈತನ್ಯ ವಿವಾಹದ ದಿನಾಂಕ ನಿಶ್ಚಯವಾಗಿದೆ.

ವಿವಾಹ ಸಂಭ್ರಮದಲ್ಲಿ ಸ್ನೇಹಿತರು ಹಾಗೂ ಕುಟುಂಬದ ಆಪ್ತರು ಭಾಗವಹಿಸಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ಜೋಡಿ 2010ರಲ್ಲಿ ತೆರೆಕಂಡ ‘ಏ ಮಾಯೆ ಚೆಸಾವೆ’, ‘ಆಟೋನಗರ್‌ ಸೂರ್ಯ’, ‘ಮನಂ’ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಸಮಂತಾ ಹಾಗೂ ನಾಗಚೈತನ್ಯ ನಡುವೆ ಪ್ರೇಮಾಂಕುರವಾಗಿದೆ ಎಂಬ ಮಾತುಗಳು ಕೇಳಿ ಬಂದ ಬಳಿಕ 2016ರಲ್ಲಿ ತಮ್ಮ ಪ್ರೇಮ ರಹಸ್ಯವನ್ನು ಒಪ್ಪಿಕೊಂಡ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ನಾಗಚೈತನ್ಯ ‘ವಿವಾಹವಾದ ಬಳಿಕವೂ ಸಮಂತಾ ಅವರಿಗೆ ಚಿತ್ರಗಳಲ್ಲಿ ಅಭಿನಯಿಸಲು ಸಂಪೂರ್ಣ ಅವಕಾಶವಿರುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಮದುವೆಯ ನಂತರ ಸಮಂತಾ ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಿಲ್ಲ ಎಂದಿರುವ ನಾಗಚೈತನ್ಯ, ‘ಒಬ್ಬ ನಟಿಯನ್ನು ತಮ್ಮ ಇಷ್ಟದಂತೆ ಪ್ರೋತ್ಸಾಹಿಸುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದಿದ್ದಾರೆ.

ಸದ್ಯ ಸಮಂತಾ ‘ರಾಜು ಗರಿ ಗಾಢಿ –2’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಚಿತ್ರ  2015ರಲ್ಲಿ ಬಿಡುಗಡೆಯಾದ ಅಕ್ಕಿನೇನಿ ನಾಗರ್ಜುನ ಅಭಿನಯಾದ ‘ರಾಜು ಗರಿ ಗಾಢಿ’ ಚಿತ್ರದ ಮುಂದುವರಿದ ಭಾಗವಾಗಿದೆ.

ಪ್ರತಿಕ್ರಿಯಿಸಿ (+)