ಶುಕ್ರವಾರ, ಡಿಸೆಂಬರ್ 6, 2019
19 °C

‘ಲೈನ್‌ಮನ್‌’ ಬದಲಿಗೆ ಪರ್ಯಾಯ ಹೆಸರು ಸೂಚಿಸಿ: ಸಚಿವ ಡಿಕೆ ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಲೈನ್‌ಮನ್‌’ ಬದಲಿಗೆ ಪರ್ಯಾಯ ಹೆಸರು ಸೂಚಿಸಿ: ಸಚಿವ ಡಿಕೆ ಶಿವಕುಮಾರ್‌

ಬೆಂಗಳೂರು: ರಾಜ್ಯ ಇಂಧನ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ‘ಲೈನ್‌ಮನ್‌’ ಹೆಸರನ್ನು ಬದಲಾಯಿಸಲು ಇಲಾಖೆ ಚಿಂತನೆ ನಡೆಸಿದೆ.

ಈ ಸಂಬಂಧ ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಅವರು, ‘ಲೈನ್‌ಮನ್‌’ ಹೆಸರಿಗೆ ಪರ್ಯಾಯವಾಗಿ ಮತ್ತೊಂದು ಹೆಸರನ್ನು ಸೂಚಿಸುವಂತೆ ಸಾರ್ವಜನಿಕರಿಗೆ ತಿಳಿಸಿದ್ದು, ಈ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟರ್‌ವೊಂದನ್ನು ಹಾಕಿದ್ದಾರೆ. ಅದಕ್ಕೆ ಸಾರ್ವಜನಿಕರು ಉತ್ತಮವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಪೋಸ್ಟ್‌ಅನ್ನು ಈವರೆಗೆ 3 ಸಾವಿರ ಮಂದಿ ವೀಕ್ಷಿಸಿದ್ದು, 2357 ಮಂದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜತೆಗೆ, 848 ಮಂದಿ ಶೇರ್‌ ಮಾಡಿದ್ದಾರೆ.

‘ಲೈನ್‍ಮನ್’ಗೆ ಪರ್ಯಾಯ ಹೆಸರು ಸೂಚಿಸಿ ಆಕರ್ಷಕ ಬಹುಮಾನ ಗೆಲ್ಲಿರಿ.

ಕರ್ನಾಟಕದಲ್ಲಿ ಸಾವಿರಾರು ‘ಲೈನ್‍ಮನ್’ಗಳು ನಮ್ಮ ಎಸ್ಕಾಂಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಕ್ಕೆ ಅವರು ನೀಡುತ್ತಿರುವ ಸೇವೆಯನ್ನು ಪರಿಗಣಿಸಿ, ರಾಜ್ಯ ಇಂಧನ ಇಲಾಖೆಯು ಈ ಹುದ್ದೆಯಲ್ಲಿರುವವರಿಗೆ ನೂತನ ಹೆಸರನ್ನು ಇಡಲು ಇಚ್ಚಿಸಿದೆ.

ದಯವಿಟ್ಟು ‘ಲೈನ್‍ಮನ್’ಗೆ ಪರ್ಯಾಯ ಹೆಸರನ್ನು ಸೂಚಿಸಿ. ಆಯ್ಕೆಯಾದ ಸಲಹೆಗೆ ಆಕರ್ಷಕ ಬಹುಮಾನವಿರಲಿದೆ. ಅಂತಿಮವಾಗಿ ಆಯ್ಕೆಯಾದ ಹೆಸರಿಗೆ ಒಂದಕ್ಕಿಂತಲೂ ಹೆಚ್ಚಿನ ಪ್ರವೇಶಗಳು ಬಂದಲ್ಲಿ ಲಕ್ಕಿ ಡ್ರಾ ಮೂಲಕ ಒಬ್ಬ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಜುಲೈ 20 ಹೆಸರು ಸೂಚನೆಗೆ ಕೊನೆಯ ದಿನಾಂಕ. ಈ ಪೋಸ್ಟ್‌ಗೆ ಫೇಸ್‍ಬುಕ್ ಮುಖಾಂತರ ಉತ್ತರಿಸಿ ಅಥವಾ ನೇರವಾಗಿ ಈ ಖಾತೆಗೆ ನಿಮ್ಮ ಸಲಹೆಯನ್ನು ನೀಡಬಹುದು ಎಂದು ತಿಳಿಸಲಾಗಿದೆ.

ಸಲಹೆಗಳನ್ನು ಕಳುಹಿಸಲು ಇ-ಮೇಲ್‍: dkshivakumarinc@gmail.com

ಅಥವಾ +919108461480 ನಂಬರ್‍ಗೆ ವಾಟ್ಸ್ ಆಪ್ ಸಂದೇಶ ಕಳುಹಿಸಿ.

ಪ್ರತಿಕ್ರಿಯಿಸಿ (+)