ಶನಿವಾರ, ಡಿಸೆಂಬರ್ 14, 2019
22 °C

ಮನೆಯಲ್ಲೇ ಮಾಡಿ ನೋಡಿ ಸಾಂಪ್ರದಾಯಿಕ ತಿನಿಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಯಲ್ಲೇ ಮಾಡಿ ನೋಡಿ ಸಾಂಪ್ರದಾಯಿಕ ತಿನಿಸು

ಹುಕ್ಕರಿಕೆ

ಬೇಕಾಗುವ ಸಾಮಗ್ರಿಗಳು: 3 ಲೋಟ ಗೋಧಿ ಕಡಿ, 1 ಲೋಟ ಮೆಂತೆ, 1 ಲೋಟ ಬೆಲ್ಲ, ಚಿಟಿಕೆ ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೆಂತೆಯನ್ನು ರಾತ್ರಿ ನೆನೆ ಹಾಕಬೇಕು. ಬೆಳಗ್ಗೆ ಮೆಂತೆಯ ಹಳದಿ ನೀರು ಹೋಗುವಂತೆ ಚೆನ್ನಾಗಿ ತೊಳೆಯಬೇಕು. ತೊಳೆದ ಮೆಂತೆಯನ್ನು ಅರ್ಧ ಗಂಟೆ ನೆನೆಸಿದ ಗೋಧಿ ಕಡಿ, ಚಿಟಿಕೆ ಉಪ್ಪು, ಬೆಲ್ಲವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಕೈಯಲ್ಲಿ ತಟ್ಟಿ ಕರಿಯಬೇಕು.

**

ಅತ್ರಸ

ಬೇಕಾಗುವ ಸಾಮಗ್ರಿಗಳು: 2 ಲೋಟ ಅಕ್ಕಿ, 1ಲೋಟ ಬೆಲ್ಲ, ಕರಿಯಲು ಎಣ್ಣೆ

ಮಾಡುವ ವಿಧಾನ: ಅರ್ಧ ಗಂಟೆ ನೆನೆ ಹಾಕಿದ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದುಕೊಂಡು ಹಿಟ್ಟಿನ ರೀತಿ ರುಬ್ಬಿಕೊಳ್ಳಬೇಕು. ನಂತರ ಬೆಲ್ಲವನ್ನು ಎಳೆ ಪಾಕ ಮಾಡಿಕೊಂಡು ಅಕ್ಕಿಯ ಹಿಟ್ಟಿಗೆ ಹಾಕಿ ಕಲಸಬೇಕು. ಕೊನೆಯಲ್ಲಿ ಕೈಯಲ್ಲಿ ತಟ್ಟಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಬೇಕು. ಕರಿದ ತಕ್ಷಣ ಸಪಾಟಾದ ಸೌಟಿನಿಂದ ಹಿಂಡಿ ಎಣ್ಣೆಯನ್ನು ತೆಗಿಯಬೇಕು. ಗಮನಿಸಬೇಕಾದ ಅಂಶಗಳು: ಮಾಡುವ ವಿಧಾನದಲ್ಲಿ ನೀರನ್ನು ಎಲ್ಲಿಯೂ ಬಳಸಬಾರದು. ಹಿಟ್ಟನ್ನು ಒಲೆಯ ಮೇಲೆ ಬೇಯಿಸಬಾರದು.

**

ಅವಲಕ್ಕಿ ನಿಪ್ಪಟ್ಟು

ಬೇಕಾಗುವ ಸಾಮಗ್ರಿಗಳು: 1 ಲೋಟ ಅವಲಕ್ಕಿ, 2 ಲೋಟ ಅಕ್ಕಿ ಹಿಟ್ಟು, ಅರ್ಧ ಲೋಟ ಮೈದಾ ಹಿಟ್ಟು, ಈರುಳ್ಳಿ, ಶುಂಠಿ, ಕೊತ್ತೊಂಬರಿ ಸೊಪ್ಪು, 3 ಹಸಿಮೆಣಸು, ಉಪ್ಪು, ಕರಿಯಲು ಎಣ್ಣೆ

ಮಾಡುವ ವಿಧಾನ: 15 ನಿಮಿಷ ನೆನಸಿದ ಅವಲಕ್ಕಿಗೆ ಈ ಎಲ್ಲಾ ಪದಾರ್ಥಗಳನ್ನು ಹಾಕಿ ಸ್ವಲ್ಪ ನೀರು ಬೆರೆಸಿ ಕಲಸಿಕೊಳ್ಳಬೇಕು. ನಂತರ ನಿಪ್ಪಟ್ಟಿನ ಆಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿಯಬೇಕು.

ಬೇಕಾಗುವ ಸಾಮಗ್ರಿಗಳು: 1ಲೋಟ ಚಿರೋಟಿ ರವೆ, ಮುಕ್ಕಾಲು ಲೋಟ ಉದ್ದಿನಬೇಳೆ, 2 ಚಮಚ ಜೀರಿಗೆ, ದನಿಯ, ಸ್ವಲ್ಪ ಮೆಂತೆ, ಸ್ವಲ್ಪ ಶುಂಠಿ, ಉಪ್ಪು, ಕೆಂಪು ಖಾರದ ಪುಡಿ, ಕರಿಯಲು ಎಣ್ಣೆ

ಮಾಡುವ ವಿಧಾನ: ಚಿರೋಟಿ ರವೆಯನ್ನು ಸ್ವಲ್ಪ ಹುರಿದುಕೊಳ್ಳಬೇಕು (ಬಣ್ಣ ಬರುವ ಮೊದಲೇ ಒಲೆಯಿಂದ ಇಳಿಸಿಕೊಳ್ಳಬೇಕು), 1 ಗಂಟೆ ನೆನೆಸಿದ ಉದ್ದಿನಬೇಳೆಗೆ ಉಳಿದ ಸಾಮಗ್ರಿಗಳ ಜೊತೆ ರುಬ್ಬಬೇಕು. ಹುರಿದ ರವೆಗೆ ಎಲ್ಲವನ್ನೂ ಮಿಕ್ಸ್ ಮಾಡಿ ಪೂರಿಯಂತೆ ಲಟ್ಟಿಸಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೂ ಕರಿಯಬೇಕು.

**

-ಎಸ್.ವಿ. ಪದ್ಮಾವತಿ

ಪ್ರತಿಕ್ರಿಯಿಸಿ (+)