ಶುಕ್ರವಾರ, ಡಿಸೆಂಬರ್ 13, 2019
21 °C

‘ಮೊಸರನ್ನ ಮಿಸ್‌ ಮಾಡ್ಕೊತಿದ್ದೀನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೊಸರನ್ನ ಮಿಸ್‌ ಮಾಡ್ಕೊತಿದ್ದೀನಿ’

* ಮುನ್ನಾ ಮೈಕೆಲ್ ನಿಮ್ಮ ಮೊದಲ ಚಿತ್ರ. ಏನನ್ನಿಸುತ್ತಿದೆ?

ಹೌದು. ಮುನ್ನಾ ಮೈಕೆಲ್ ನನ್ನ ಸಿನಿ ಬದುಕಿನ ಮೊದಲ ಸಿನಿಮಾ. ಈ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆಗಳಿವೆ. ಸಿನಿಮಾದ ಟ್ರೇಲರ್ ಬಗ್ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್‌ ಆಫೀಸಿನಲ್ಲಿ ಸಿನಿಮಾ ಹಿಟ್ ಆಗುವ ನಿರೀಕ್ಷೆ ಇದೆ.

* ಟೈಗರ್ ಶ್ರಾಫ್, ನವಾಜುದ್ದೀನ್ ಸಿದ್ದಿಕಿ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಅವರಿಬ್ಬರ ಜತೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಚಿತ್ರದಲ್ಲಿ ತನ್ಮಯಳಾಗಿ ತೊಡಗಿಸಿಕೊಳ್ಳಲು ಅವರಿಬ್ಬರೂ ನನ್ನನ್ನು ಪ್ರೋತ್ಸಾಹಿಸಿದರು. ಸದ್ಯ ಅವರ ಪ್ರಕಾರ ನಾನು ಚೆನ್ನಾಗಿ ಅಭಿನಯಿಸಿದ್ದೇನೆ (ನಗು), ಟೈಗರ್ ಅವರಂತೂ ನನಗೆ ತುಂಬಾ ಸಹಕರಿಸಿದರು. ಅವರೊಂದಿಗೆ ಕಂಫರ್ಟ್‌ ಆಗಿ ಇರುವಂತೆ ನೋಡಿಕೊಂಡರು. ನವಾಜುದ್ದೀನ್ ಅವರನ್ನು ನೋಡಿ ಅಭಿನಯದ ಕೆಲ ಪಟ್ಟುಗಳನ್ನು ಕಲಿತುಕೊಂಡೆ.

* ಈ ಸಿನಿಮಾದಲ್ಲಿ ನೃತ್ಯವೇ ಹೆಚ್ಚಾಗಿದೆಯೆಲ್ಲಾ...

ನಿಜ. ಅದರಲ್ಲೂ ಟೈಗರ್ ಶ್ರಾಫ್ ಅವರ ಜತೆ ನೃತ್ಯ ಮಾಡುವುದು ಸುಲಭದ ಮಾತಲ್ಲ. ಅವರು ಸಿನಿಮಾ ಇಂಡಸ್ಟ್ರಿಯಲ್ಲೇ ಅತ್ಯುತ್ತಮ ನೃತ್ಯಗಾರ. ಅವರ ಜತೆ ನೃತ್ಯ ಮಾಡಲು  ಅವಕಾಶ ಸಿಕ್ಕಿದ್ದು ಅದೃಷ್ಟ. ಅವರ ಜತೆಗಿದ್ದು ನಾನು ನೃತ್ಯದಲ್ಲಿ ಮತ್ತಷ್ಟು ಪಳಗಿದೆ.

* ನಿಮ್ಮ ಜತೆಗೆ ಬಾಲಿವುಡ್‌ಗೆ ಹೊಸ ನಟ–ನಟಿಯರು ಪದಾರ್ಪಣೆ ಮಾಡುತ್ತಿದ್ದಾರೆ. ಇದು ನಿಮಗೆ ಕಠಿಣ ಸ್ಪರ್ಧೆಅನಿಸುತ್ತಿಲ್ಲವೇ?

ಕಾಲ ಯಾವುದೇ ಇರಲಿ ಬಹಳಷ್ಟು ಹೊಸ ಕಲಾವಿದರು ಸಿನಿಮಾಲೋಕಕ್ಕೆ  ಇರುತ್ತಾರೆ. ಆದರೆ, ನನ್ನನ್ನು ನಾನು ಅದೃಷ್ಟಶಾಲಿ ಎಂದೇ ಪರಿಗಣಿಸುತ್ತೇನೆ. ಏಕೆಂದರೆ ನನಗೆ ಈ ಸಿನಿಮಾದಲ್ಲಿ ಅದ್ಭುತವಾದ ಪಾತ್ರ ಸಿಕ್ಕಿದೆ. ನಿರ್ದೇಶಕ ಶಬ್ಬೀರ್ ಖಾನ್ ಹೊಸ ಮುಖಕ್ಕಾಗಿ ಹುಡುಕುತ್ತಿದ್ದಾಗ ನಾನು ಸಿಕ್ಕಿದ್ದು ಅದೃಷ್ಟವಲ್ಲವೇ?

* ಮತ್ಯಾವ ಹೊಸ ಚಿತ್ರಗಳಿಗೆ ಸಹಿ ಹಾಕಿರುವಿರಿ?

ಸದ್ಯಕ್ಕೆ ಬೇರೆ ಬ್ಯಾನರ್‌ನ ಸಿನಿಮಾಗಳಿಗೆ ಸಹಿ ಹಾಕಿಲ್ಲ. ಪ್ರಸ್ತುತ ಇರೋಸ್ ಇಂಟರ್‌ನ್ಯಾಷನಲ್ ಜತೆ ಕೆಲಸ ಮಾಡುತ್ತಿದ್ದೇನೆ. ಇದರ ಜತೆಯೇ ಇನ್ನೂ ಅನೇಕ ಸಿನಿಮಾಗಳನ್ನು ಮಾಡಲಿದ್ದೇನೆ.* ಮುಂ

ದಿನ ಸಿನಿಮಾದಲ್ಲಿ ಇಂಥದ್ದೇ ನಿರ್ದಿಷ್ಟ ತಪ್ಪು ಮಾಡಬಾರದು ಅಂತ ಅಂದುಕೊಂಡಿದ್ದೀರಾ?

ನನ್ನ ಪ್ರಕಾರ ತಪ್ಪುಗಳು ಮಹತ್ವದ್ದು. ನನಗೆ ಗೊತ್ತು ನಾನು ನಿರಂತರವಾಗಿ ತಪ್ಪುಗಳನ್ನು ಮಾಡುತ್ತೇನೆ ಎಂದು. ಆದರೆ, ಮಾಡಿದ ತಪ್ಪುಗಳನ್ನೇ ದೀರ್ಘಕಾಲ ಮಾಡುವ ಸ್ವಭಾವ ನನ್ನದಲ್ಲ. ಮುಂದಿನ ಸಿನಿಮಾದಲ್ಲಿ ನಾನು ನಟಿಯಾಗಿ ತಾಂತ್ರಿಕವಾಗಿ ಮಾಡಿರುವ ಓರೆಕೋರೆಗಳನ್ನು ಪುನಃ ಮಾಡಲು ಬಯಸುವುದಿಲ್ಲ. ಮುನ್ನಾ ಮೈಕೆಲ್ ಸಿನಿಮಾ ಮಾಡುವಾಗ ನನಗೆ ಏನೂ ಗೊತ್ತಿರಲಿಲ್ಲ. ಆದರೆ, ಆ ಸಿನಿಮಾದಲ್ಲಿ ಆದ ತಪ್ಪುಗಳನ್ನು ಮುಂದೆ ಮಾಡುವುದಿಲ್ಲ.

* ಜನಪ್ರಿಯತೆಯ ಖುಷಿಯನ್ನು ಅನುಭವಿಸುತ್ತಿದ್ದೀರಾ?

ಹೌದು. ಜನಪ್ರಿಯತೆಯನ್ನು ನಾನು ಪ್ರೀತಿಸುತ್ತೇನೆ. ನನ್ನ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಇಷ್ಟೊಂದು ಜನಪ್ರಿಯತೆ ಸಿಕ್ಕಿರುವಾಗ ಆ ಖುಷಿಯನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ.

* ಬೆಂಗಳೂರಿನಿಂದ ಏನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ?

ಬೆಂಗಳೂರಿನ ಇಡ್ಲಿ, ದೋಸೆ ಮತ್ತು ಮೊಸರನ್ನ ಮಿಸ್ ಮಾಡಿಕೊಳ್ತಾ ಇದ್ದೀನಿ. ಇವೆಲ್ಲವೂ ನನ್ನಿಷ್ಟದ ತಿಂಡಿಗಳು.

ಪ್ರತಿಕ್ರಿಯಿಸಿ (+)