ಸದ್ಯ ನೇವಾರ್ಕ್, ನ್ಯೂಯಾರ್ಕ್ ಮತ್ತು ಷಿಕಾಗೊ ನಡುವೆ ಪ್ರತಿದಿನ ವಿಮಾನ ಸೌಲಭ್ಯವಿದೆ. ದೆಹಲಿ– ಸ್ಯಾನ್‌ಫ್ರಾನ್ಸಿಸ್ಕೊ ನಡುವಿನ ವಿಮಾನ ವಾರದಲ್ಲಿ ಆರು ಬಾರಿ ಹಾರಾಟ ನಡೆಸುತ್ತಿದೆ. ಲಾಸ್ ಏಂಜಲೀಸ್, ಹ್ಯೂಸ್ಟನ್ ಸೇರಿದಂತೆ ಅಮೆರಿಕದ ಇತರ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲು ಏರ್ ಇಂಡಿಯಾ ಉದ್ದೇಶಿಸಿದೆ. ಸಂಸ್ಥೆಯ ಒಟ್ಟು ಆದಾಯದಲ್ಲಿ ಶೇ 20ರಷ್ಟು ಪಾಲು, ಅಮೆರಿಕಕ್ಕೆ ವಿಮಾನ ಸೌಲಭ್ಯ ಒದಗಿಸಿರುವುದರಿಂದ ಬರುತ್ತಿದೆ.