ಶುಕ್ರವಾರ, ಡಿಸೆಂಬರ್ 13, 2019
17 °C

ಶುಭ ಯೋಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಭ ಯೋಗ!

ನಟಿ ಶುಭಾ ಪೂಂಜಾ ಸಾಕಷ್ಟು ಕಸರತ್ತುಗಳನ್ನು ಮಾಡಿ ಈಗ ದೇಹವನ್ನು ಫಿಟ್‌ಆಗಿ ಕಾಯ್ದುಕೊಂಡಿದ್ದಾರೆ. ಹೊಟ್ಟೆ ಭಾಗದಲ್ಲಿ ಬೊಜ್ಜು ಹೆಚ್ಚಾಗಿ, ನೋಡಲು ಚಂದ ಕಾಣುತ್ತಿಲ್ಲ, ಸ್ಕ್ರೀನ್‌ ಮೇಲೆಯೂ ಚೆಂದುಳ್ಳಿ ಚೆಲುವೆಯಾಗಿ ಕಾಣುತ್ತಿಲ್ಲ ಎಂದು ಆರು ತಿಂಗಳಿಂದ ಕಟ್ಟುನಿಟ್ಟಾಗಿ ಯೋಗ ಮಾಡುತ್ತಿದ್ದಾರೆ.

ತೂಕ ಕಡಿಮೆ ಮಾಡಿಕೊಳ್ಳುವುದು ಮುಖ್ಯವಲ್ಲ, ದೇಹ ಫಿಟ್‌ ಆಗಿರುವುದು ಮುಖ್ಯ ಎನ್ನುತ್ತಾರೆ ಅವರು. ‘ಆರು ತಿಂಗಳ ಹಿಂದೆ ಹೊಟ್ಟೆ ಭಾಗದಲ್ಲಿ ಬೊಜ್ಜು ಬಂದಿತ್ತು. ಸಿನಿಮಾ ಕ್ಷೇತ್ರದಲ್ಲಿ ಇರುವುದರಿಂದ ದೇಹದ ಫಿಟ್‌ನೆಸ್‌ ಮುಖ್ಯವಾಗುತ್ತದೆ. ದೇಹದ ಅನಗತ್ಯ ಕೊಬ್ಬು ಕರಗಿಸಿದ್ದರಿಂದ ಆ್ಯಕ್ಟೀವ್‌ ಆಗಿದ್ದೇನೆ ಅನಿಸುತ್ತಿದೆ. ನಾನು ತೆಳ್ಳಗಿದ್ದಾಗ ಹಾಕಿಕೊಳ್ಳುತ್ತಿದ್ದ ಬಟ್ಟೆಗಳು ಈಗ ಬಳಸುತ್ತಿದ್ದೇನೆ. ಸ್ಕ್ರೀನ್‌ ಮೇಲೆ ನೋಡಲು ಚಂದ ಕಾಣುತ್ತಿದ್ದೇನೆ’ ಎನ್ನುತ್ತಾರೆ ಶುಭಾ.

ಇಂತಿಪ್ಪ ಶುಭಾ, ತಮ್ಮ ದೇಹದ ಫಿಟ್‌ನೆಸ್‌ಗಾಗಿ ಏನೆಲ್ಲಾ ಮಾಡಿದ್ದಾರೆ ಗೊತ್ತಾ?

ಬೆಳಿಗ್ಗೆ ಒಂದು ಗಂಟೆ ಯೋಗ ಮಾಡುತ್ತಾರೆ, ಸೂರ್ಯ ನಮಸ್ಕಾರ ಸೇರಿದಂತೆ ಹಲವು ಸರಳ ಆಸನಗಳನ್ನು ಮಾಡುತ್ತಾರಂತೆ.

ಚಿತ್ರೀಕರಣದ ಸಂದರ್ಭದಲ್ಲಿ ಬಿಡುವು ಸಿಕ್ಕರೆ ಈಜುತ್ತಾರೆ. ಸೈಕಲ್‌ ಓಡಿಸುವುದು, ವಾಕಿಂಗ್‌ ಮಾಡುವುದನ್ನು ತಪ್ಪಿಸುವುದಿಲ್ಲವಂತೆ.

ಆಹಾರ ಕ್ರಮ

ಬೆಳಿಗ್ಗೆ ಕುಚಿಲಕ್ಕಿ ಅನ್ನ, ಗಂಜಿ, ಮಧ್ಯಾಹ್ನ ನವಣೆ ಅಕ್ಕಿ ‍ಪೊಂಗಲ್‌, ಸಂಜೆ ಎರಡು ಚಪಾತಿ, ತರಕಾರಿ ಪಲ್ಯ. ಸಂಜೆ 7.30ಕ್ಕೆ ಚಪಾತಿ ಪಲ್ಯ.

ಎತ್ತರ: 5.2

ತೂಕ: 58 ಕೆ.ಜಿ.v

ಪ್ರತಿಕ್ರಿಯಿಸಿ (+)