ಶುಕ್ರವಾರ, ಡಿಸೆಂಬರ್ 13, 2019
20 °C
ಗಾಯಾಳು ಸಾವು, ಇನ್ನೊಬ್ಬನ ಮೇಲೆ ಹಲ್ಲೆ

ಬಂಟ್ವಾಳದಲ್ಲಿ ಮತ್ತೆ ಘರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳದಲ್ಲಿ ಮತ್ತೆ ಘರ್ಷಣೆ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ಇದೇ 4ರಂದು ಹಲ್ಲೆಗೊಳಗಾಗಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್‌ ಮಡಿವಾಳ (28) ಶುಕ್ರವಾರ ಸಂಜೆ ನಗರದ ಎ.ಜೆ.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮತ್ತೊಂದೆಡೆ ಶುಕ್ರವಾರ ಸಂಜೆ ಅಡ್ಯಾರ್‌ ಪದವುನಲ್ಲಿ ಪೆಟ್ರೋಲ್ ಕೇಳುವ ನೆಪದಲ್ಲಿ ದುಷ್ಕರ್ಮಿಗಳ ತಂಡವೊಂದು ಯುವಕರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳದ ಮಲಪ್ಪುರಂನ ಸಾಜಿದ್ (23) ಗಂಭೀರವಾಗಿ ಗಾಯಗೊಂಡಿದ್ದಾರೆ.ಸಾಜಿದ್ ಮತ್ತು ಆತನ ಸ್ನೇಹಿತ ನೌಫಲ್ ಅಡ್ಯಾರ್ ಪದವುನಿಂದ ಬಿತ್ತುಪಾದೆಗೆ ಹೋಗುತ್ತಿದ್ದರು. ಅಡ್ಯಾರ್ ಪದವುನಲ್ಲಿ ಬೈಕ್ ನಿಲ್ಲಿಸಿದ ಮೂವರ ತಂಡ ‘ಪೆಟ್ರೋಲ್ ಖಾಲಿಯಾಗಿದೆ. ಪೆಟ್ರೋಲ್ ಇದ್ದರೆ ಕೊಡಿ’ ಎಂದು ಕೇಳಿತು.ಸಾಜಿದ್ ಹಾಗೂ ನೌಫಲ್ ಪೆಟ್ರೋಲ್ ನೀಡಲು ಮುಂದಾಗುತ್ತಿದ್ದಂತೆ ಅವರ ಮೇಲೆ ದಾಳಿ ನಡೆಸಿದ ತಂಡ ಪರಾರಿಯಾಯಿತು. ಸಾಜಿದ್‌ ಅವರ ಕೈ ಹಾಗೂ ಹೊಟ್ಟೆ ಬಲಭಾಗಕ್ಕೆ ಗಾಯಗಳಾಗಿವೆ.

ಪ್ರತಿಕ್ರಿಯಿಸಿ (+)