ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರೀನ್‌ ಸ್ಕಿಲ್ಸ್‌ ಅಕಾಡೆಮಿಯಿಂದ 14 ಕೌಶಲ ಕೋರ್ಸ್‌ ಆರಂಭ’

Last Updated 7 ಜುಲೈ 2017, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರೀನ್‌ ಸ್ಕಿಲ್ಸ್‌ ಅಕಾಡೆಮಿಯು ವಿವಿಧ ವಿಷಯಗಳಿಗೆ ಸಂಬಂಧಿಸಿದ 14 ಕೌಶಲ ಕೋರ್ಸ್‌ಗಳನ್ನು ಆರಂಭಿಸುತ್ತಿದೆ’ ಎಂದು ಸುಸ್ಥಿರ ಅಭಿವೃದ್ಧಿ ಕೇಂದ್ರದ (ಸಿಎಸ್‌ಡಿ) ಅಧ್ಯಕ್ಷ ಎ.ರವೀಂದ್ರ ಹೇಳಿದರು.

ಸಿಎಸ್‌ಡಿ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಪರಿಸರಸ್ನೇಹಿ ಕೌಶಲ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

‘ಪರಿಸರಸ್ನೇಹಿ ಕೌಶಲ ತರಬೇತಿ ನೀಡುವ ಉದ್ದೇಶದಿಂದ ಈ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ನೀರಿನ ನಿರ್ವಹಣೆ, ನವೀಕರಿಸಬಹುದಾದ ಶಕ್ತಿಯ ಬಳಕೆ, ಪರಿಸರಸ್ನೇಹಿ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕೌಶಲ ಕೋರ್ಸ್‌ಗಳನ್ನು ನಡೆಸಲಾಗುತ್ತದೆ’ ಎಂದು ತಿಳಿಸಿದರು.

‘ಇವು ಅಲ್ಪಾವಧಿ ಕೋರ್ಸ್‌ಗಳಾಗಿವೆ.  ತಾಂತ್ರಿಕ ಕೌಶಲ ವೃದ್ಧಿಸುವುದು ಇದರ ಮುಖ್ಯ ಉದ್ದೇಶ. ಈ ಕೋರ್ಸ್‌ಗಳ ರೂಪರೇಷೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ’ ಎಂದರು.

‘ಸಸ್ಟೈನಬಲಿಟಿ’ ಸಂಸ್ಥೆಯ ನಿರ್ದೇಶಕ ಆರ್‌.ಕೆ.ಗೌತಮ್‌, ‘10 ವರ್ಷಗಳ ಹಿಂದೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೌಶಲಯುತ ಕಾರ್ಮಿಕರ ಕೊರತೆ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ಆದರೆ, ಪರಿಸರಸ್ನೇಹಿ ಮನೆಗಳ ನಿರ್ಮಾಣಕ್ಕೆ ನಾವು ಹೆಚ್ಚಿನ ಒತ್ತು ನೀಡಬೇಕು. ನೀರು, ಶಕ್ತಿ ಹಾಗೂ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು. ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.



‘ಹೊರಗುತ್ತಿಗೆ ನೀಡುವ ಪದ್ಧತಿಯು ಒಳ್ಳೆಯ ವ್ಯವಸ್ಥೆ. ಇಲ್ಲಿನ ಕಂಪೆನಿಯು ವಿದೇಶದ ಅಥವಾ ದೇಶದ ಯಾವುದಾದರೂ ನಗರದಲ್ಲಿ ಶಾಖೆಯೊಂದನ್ನು ಸ್ಥಾಪಿಸಬೇಕಾದರೆ ಅದಕ್ಕೆ ಬಂಡವಾಳ, ಸಂಪನ್ಮೂಲಗಳ ಅಗತ್ಯ ಇರುತ್ತದೆ. ಆದರೆ, ಹೊರಗುತ್ತಿಗೆ ನೀಡುವುದರಿಂದ ಇವುಗಳನ್ನು ಉಳಿಸಬಹುದು’ ಎಂದರು.

ವಿಳಾಸ: ಗ್ರೀನ್‌ ಸ್ಕಿಲ್ಸ್‌ ಅಕಾಡೆಮಿ, #381, 2ನೇ ಮಹಡಿ, 100 ಅಡಿ ರಸ್ತೆ, ಎಚ್‌ಎಎಲ್‌ 2ನೇ ಹಂತ, ಇಂದಿರಾನಗರ. ದೂರವಾಣಿ ಸಂಖ್ಯೆ 080– 65603839, 41107560.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT