ಸೋಮವಾರ, ಡಿಸೆಂಬರ್ 16, 2019
23 °C

ಟ್ವೀಟರ್‌ ಖಾತೆ ಆರಂಭಿಸಿದ 14 ಗಂಟೆಯಲ್ಲಿ ನಾಲ್ಕು ಲಕ್ಷ ಹಿಂಬಾಲಕರನ್ನು ಹೊಂದಿದ ಮಲಾಲ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಟ್ವೀಟರ್‌ ಖಾತೆ ಆರಂಭಿಸಿದ 14 ಗಂಟೆಯಲ್ಲಿ ನಾಲ್ಕು ಲಕ್ಷ ಹಿಂಬಾಲಕರನ್ನು ಹೊಂದಿದ ಮಲಾಲ

ಬ್ರಿಟನ್‌: ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ  ಹಾಗೂ ಪಾಕಿಸ್ತಾನದ ಮಾನವ ಹಕ್ಕುಗಳ ಯುವ ಹೋರಾಟಗಾರ್ತಿ ಮಲಾಲ ಯೂಸೂಫ್‌ಝೈ ಅವರು ಶುಕ್ರವಾರ ಟ್ವೀಟರ್‌ ಖಾತೆ ತೆರೆದಿದ್ದು, ಕೇವಲ 14 ಗಂಟೆಗಳಲ್ಲಿ 4.05ಲಕ್ಷ ಮಂದಿ ಹಿಂಬಾಲಕರನ್ನು ಹೊಂದುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇದೀಗ ಮಲಾಲ ತಮ್ಮ ಶಾಲಾ ಶಿಕ್ಷಣವನ್ನು ಬ್ರಿಟನ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ಈ ಕುರಿತು ತಮ್ಮ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಇಂದು ನನ್ನ ಶಾಲೆಯ ಕೊನೆಯ ದಿನ ಹಾಗೂ ಟ್ವೀಟರ್‌ನಲ್ಲಿ ಮೊದಲ ದಿನ’ ಎಂದು ಬರೆದಿದ್ದಾರೆ.

ಪಾಕಿಸ್ತಾನದ ಸ್ವಾತ್‌ ಕಣಿವೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿದ್ದ ಮಲಾಲ ಅವರ ಮೇಲೆ 2012ರಲ್ಲಿ ತಾಲಿಬಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

‘ಹಾಯ್‌, ಟ್ವಿಟರ್‌’ ಎಂದು ಮೊದಲ ಟ್ವೀಟ್‌ ಮಾಡಿರುವ ಮಲಾಲ, ಕೆಲವೇ ಗಂಟೆಗಳಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದುವ ಮೂಲಕ ದಿಗ್ಭ್ರಮೆಗೊಳಿಸಿದ್ದಾರೆ.

*

*

*

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್‌, ಕೆನಡಾದ ಅಧ್ಯಕ್ಷ  ಜಸ್ಟಿನ್ ಟ್ರುಡಿಯು, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್ ಗೇಟ್ಸ್, ಅಮೆರಿಕಾದ ರಾಜಕರಣಿಗಳು ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಮಲಾಲ ಅವರಿಗೆ ಟ್ವೀಟರ್‌ನಲ್ಲಿ ಸ್ವಾಗತ ಕೋರಿದ್ದಾರೆ.

ಏಳು ಬಾರಿ ಸರಣಿ ಟ್ವೀಟ್‌ ಮಾಡಿರುವ ಮಲಾಲ, ‘ವಿಶ್ವದಾದ್ಯಂತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ’.

ಪ್ರತಿಕ್ರಿಯಿಸಿ (+)