45ನೇ ವಸಂತ ಪೂರೈಸಿದ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ

ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಶನಿವಾರ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
Happy Birthday to one of India's finest cricketers, Sourav Ganguly!
What is your favourite memory from his career? pic.twitter.com/ufGXZVl91e
— ICC (@ICC) July 8, 2017
*
Happy Birthday, @SGanguly99. Here's wishing you a great year ahead #HappyBirthdayDada pic.twitter.com/42tPO25fjN
— BCCI (@BCCI) July 8, 2017
*
A very Happy Birthday to @SGanguly99
— Mamata Banerjee (@MamataOfficial) July 8, 2017
*
Wishing dearest @SGanguly99 many happy returns of the day lots of love dadi. pic.twitter.com/aayhy5VFWa
— yuvraj singh (@YUVSTRONG12) July 8, 2017
*
Many many happy returns of the day dada! Hope you continue to show direction to #bengal cricket as always! @SGanguly99 #HappyBirthdayDada pic.twitter.com/hpptfaw10L
— Pragyan Ojha (@pragyanojha) July 7, 2017
ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಪ್ರಗ್ಯಾನ್ ಓಜಾ ಟ್ವೀಟರ್ನಲ್ಲಿ ಸೌರವ್ ಗಂಗೂಲಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತದ ಕ್ರಿಕೆಟ್ ತಂಡ 2003ರ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿತ್ತು. ಜತೆಗೆ, 2000, 2002ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಪೈಪೋಟಿ ನೀಡಿತ್ತು.
ಸದ್ಯ ಸೌರವ್ ಗಂಗೂಲಿ ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಷನ್(ಸಿಎಬಿ) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವೊಮ್ಮೆ ಪಂದ್ಯ ವೀಕ್ಷಕ ವಿವರಣೆಗಾರರಾಗಿಯೂ ಕಾಣಿಸಿಕೊಳ್ಳುತ್ತಾರೆ.
ಅಂತರ ರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೌರವ್ ಗಂಗೂಲಿಯ ಸಾಧನೆ
* 113 ಟೆಸ್ಟ್ ಪಂದ್ಯಗಳಲ್ಲಿ 7,212 ರನ್ ಗಳಿಸಿದ್ದಾರೆ.
* 311 ಏಕದಿನ ಪಂದ್ಯಗಳಲ್ಲಿ 11, 363 ರನ್ ಗಳಿಸಿದ್ದಾರೆ.