ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಂ ಇಂಡಿಯಾಗೆ ಎಂ.ಎಸ್‌.ದೋನಿಯ ಕೊಡುಗೆ ನೆನಪಿಸುವ ವಿಡಿಯೊ: ಅಭಿಮಾನಿಗಳ ಮೆಚ್ಚುಗೆ

Last Updated 8 ಜುಲೈ 2017, 7:42 IST
ಅಕ್ಷರ ಗಾತ್ರ

ಕಿಂಗ್ಸ್‌ಟನ್‌: ಟೀಂ ಇಂಡಿಯಾದ ಕ್ಯಾಪ್ಟನ್‌ ಕೂಲ್‌ ಎಂದೇ ಹೆಸರಾಗಿರುವ ಎಂ.ಎಸ್‌.ದೋನಿ ಶುಕ್ರವಾರ 36ರ ವಸಂತಕ್ಕೆ ಕಾಲಿಟ್ಟಿದ್ದಾರೆ.

ದೋನಿಯ ಹುಟ್ಟುಹಬ್ಬದ ಪ್ರಯುಕ್ತ ಟೀಂ ಇಂಡಿಯಾದ ಹಿರಿಯ ಆಟಗಾರರು ಶುಭ ಕೋರಿದ್ದಾರೆ. ಜತೆಗೆ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಎಂ.ಎಸ್‌.ದೋನಿಯ ಸಾಧನೆ ಕುರಿತು ವಿಡಿಯೊ ಬಿಡುಗಡೆ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಸ್ತುತ ದೋನಿ ವೆಸ್ಟ್‌ ಇಂಡೀಸ್‌ ವಿರುದ್ಧ ಕ್ರಿಕೆಟ್‌ ಸರಣಿಯಲ್ಲಿ ಆಡುತ್ತಿದ್ದಾರೆ. ಗುರುವಾರ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ ಗೆಲುವು ಸಾಧಿಸಿತ್ತು. ಜತೆಗೆ 3–1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು. ಈ ಟೂರ್ನಿಯಲ್ಲಿ ದೋನಿ ವೈಯಕ್ತಿಕವಾಗಿ 154 ರನ್‌ ಸಿಡಿಸಿದ್ದಾರೆ.

ಅಂತರ ರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ), ಬಿಸಿಸಿಐ ಸೇರಿದಂತೆ ಭಾರತದ ಮಹಿಳಾ ಕ್ರಿಕೆಟ್‌ ತಂಡ ನಾಯಕಿ ಮಿಥಾಲಿ ರಾಜ್‌, ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌, ಬಿಸಿಸಿಐ ಅಯ್ಕೆ ಸಮಿತಿಯ(ಸಿಎಸಿ)ಸದಸ್ಯ ವಿವಿಎಸ್‌ ಲಕ್ಷ್ಮಣ್‌, ಆಕಾಶ್‌ ಚೋಪ್ರಾ ಸೇರಿದಂತೆ ಹಿರಿಯ ಆಟಗಾರರು ದೋನಿಗೆ ಶುಭ ಹಾರೈಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT