ಬುಧವಾರ, ಡಿಸೆಂಬರ್ 11, 2019
20 °C

ಮಾರುಕಟ್ಟೆಗೆ ಬಂತು ಜಿಎಸ್‌ಟಿ ಸಾಫ್ಟ್‌ವೇರ್‌!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಮಾರುಕಟ್ಟೆಗೆ ಬಂತು ಜಿಎಸ್‌ಟಿ ಸಾಫ್ಟ್‌ವೇರ್‌!

ಬಳ್ಳಾರಿ: ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯ ನಿಯಮಗಳ ಅನ್ವಯ ರಸೀದಿಯನ್ನು ಮುದ್ರಿಸಿ ವಹಿ ವಾಟು ಮುಂದುವರಿಸಲು ಕಷ್ಟಪಡು ತ್ತಿರುವ ಉತ್ಪಾದಕರು ಮತ್ತು ವರ್ತಕರಿಗಾಗಿ ಈಗ ಮಾರುಕಟ್ಟೆಯಲ್ಲಿ ಜಿಎಸ್‌ಟಿ ಸಾಫ್ಟ್‌ವೇರ್‌ ಬಂದಿದೆ.

ಇಲ್ಲಿನ ಜೀನ್ಸ್‌ ಸಿದ್ಧ ಉಡುಪು ತಯಾರಕರು ಈ ಸಾಫ್ಟ್‌ವೇರ್‌ ಮೂಲಕ ವಹಿವಾಟು ನಡೆಸುವ ಚಿಂತನೆಯಲ್ಲಿ ದ್ದಾರೆ. ಹೈದರಾಬಾದ್‌ ಮೂಲದ ಸ್ಕ್ರಿಪ್ಟ್‌ಬಿ ಐ ಟಿ ಪ್ರೈ.ಲಿ. ಸಂಸ್ಥೆಯ ತಂತ್ರ ಜ್ಞರು ಮೊದಲ ಬಾರಿಗೆ ಎರಡು ತಂಡಗಳಲ್ಲಿ ನಗರಕ್ಕೆ ಬಂದಿಳಿದಿದ್ದಾರೆ. ‘ಜಿಎಸ್‌ಟಿ ರಿಪೋರ್ಟಿಂಗ್‌’ ವ್ಯವಸ್ಥೆ ಯನ್ನು ಅವರು ಪರಿಚಯಿಸುತ್ತಿದ್ದಾರೆ.

ಇದೇ ವೇಳೆ, ಸ್ಥಳೀಯ ಕಂಪ್ಯೂಟರ್‌ ತಂತ್ರಜ್ಞರು ಜಿಎಸ್‌ಟಿ ಮಾದರಿಯಲ್ಲಿ ರಸೀದಿ, ಲೆಕ್ಕಪತ್ರ ತಯಾರಿಸಲು ಬೇಕಾದ ವ್ಯವಸ್ಥೆ ಮಾಡಿಕೊಡಲು ಕನಿಷ್ಠ ₹20 ಸಾವಿರ ಶುಲ್ಕವನ್ನು ನಿಗದಿ ಮಾಡಿದ್ದಾರೆ. ಅದೇ ಕಾರಣದಿಂದ, ಕಡಿಮೆ ಶುಲ್ಕ ಪಡೆಯುವ ಹೈದರಬಾದ್‌ನ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ.

₹ 2500 ಶುಲ್ಕ: ‘ನಮ್ಮದು ಕ್ಲೌಡ್‌ ಆಧಾರಿತ ಸಾಫ್ಟ್‌ವೇರ್‌ ಆಗಿರುವು ದರಿಂದ, ಇಂಟರ್‌ನೆಟ್‌ ಸೌಲಭ್ಯವಿರುವ ಎಲ್ಲಿಯೇ ಆದರೂ, ಉತ್ಪಾದಕರು ರಸೀದಿಯನ್ನು ತೆಗೆದು ವರ್ತಕರಿಗೆ ನೀಡಬಹುದು. ಈ ಪ್ರಾಥಮಿಕ ಅನು ಕೂಲವುಳ್ಳ ಸಾಫ್ಟ್‌ವೇರ್‌ಗೆ ವಾರ್ಷಿಕ ₹ 2500 ಶುಲ್ಕ ನಿಗದಿ ಮಾಡಲಾಗಿದೆ.

ಆದಾಯ ತೆರಿಗೆ ಪಾವತಿಗೆ ಪ್ರತ್ಯೇಕ ಶುಲ್ಕವನ್ನು ನಿಗದಿಪಡಿಸಲಾಗುವುದು’ ಎಂದು ತಂತ್ರಜ್ಞರ ತಂಡದ ನರೇಂದ್ರ ತಿಳಿಸಿದರು. ‘ರಾಜ್ಯ ಸರಕು ಸೇವಾ ತೆರಿಗೆ (ಎಸ್‌ಜಿಎಸ್‌ಟಿ), ಕೇಂದ್ರ ಸರಕು ಸೇವಾ ತೆರಿಗೆ (ಸಿಜಿಎಸ್‌ಟಿ) ಮತ್ತು ಅಂತರರಾಜ್ಯ ಸರಕು ಸೇವಾ ತೆರಿಗೆ (ಐಜಿಎಸ್‌ಟಿ)ಯ ಪೈಕಿ ಯಾವುದನ್ನು ನಮೂದಿಸಬೇಕು ಎಂಬ ಗೊಂದಲವಿರುವುದಿಲ್ಲ. ಒಮ್ಮೆ ತಮ್ಮ ವಹಿವಾಟಿನ ಅಂಕಿ ಅಂಶಗಳನ್ನು ನಮೂದಿಸಿದರೆ ಸಾಕು.ನಂತರ ಪ್ರತಿ ಹಂತದಲ್ಲೂ ಲೆಕ್ಕಾಚಾರ ಮಾಡಬೇಕಾಗಿಲ್ಲ. ಹೀಗಾಗಿ ಸಾಫ್ಟ್‌ವೇರ್‌ ಅನುಕೂಲಕರ’ ಎಂದರು.

ದುಬಾರಿಯಲ್ಲ, ಸರಳ: ಸಣ್ಣ ಮತ್ತು ಮದ್ಯಮ ದರ್ಜೆಯ ಉದ್ಯಮಿಗಳಿಗೆ ಇಆರ್‌ಟಿ (ಎಂಟರ್‌ಪ್ರೈಸ್‌ ರಿಸೋರ್ಸ್‌ ಪ್ಲಾನಿಂಗ್‌) ಸಾಫ್ಟ್‌ವೇರ್‌ ಹಾಗೂ ಟ್ಯಾಲಿ ಸಾಫ್ಟ್‌ವೇರ್ ದುಬಾರಿಯಾಗುತ್ತದೆ. ಹೀಗಾಗಿ ಅವರಿಗೆ ತಕ್ಷಣಕ್ಕೆ ಅನುಕೂಲಕರವಾದ, ಪ್ರತಿ ವರ್ಷ ನವೀಕರಿಸಬಹುದಾದ ಸಾಫ್ಟ್‌ವೇರ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದರು.

‘ರಸೀದಿಯೇ ತಲೆನೋವು’

‘ಹೊಸ ಪದ್ಧತಿ ಯಲ್ಲಿ ಪ್ರತಿ ರಸೀದಿಯನ್ನು ಸಿದ್ಧಪಡಿಸು ವುದು ದೊಡ್ಡ ತಲೆನೋವಾಗಿದೆ. ರಾಜ್ಯ ಮತ್ತು ಕೇಂದ್ರ ಹಾಗೂ ಅಂತರರಾಜ್ಯದ ಜಿಎಸ್‌ಟಿಯನ್ನು ಲೆಕ್ಕ ಮಾಡಿ ಉಲ್ಲೇಖಿ ಸುವುದು, ಖರೀದಿದಾರರ ವಿಳಾಸ, ವಹಿವಾಟಿನ ಮಾಹಿತಿಯನ್ನು ನಮೂದಿ ಸುವುದು, ಅವೆಲ್ಲವನ್ನೂ ವಾರ್ಷಿಕ ಅಂಕಿ–ಅಂಶದಲ್ಲಿ ಕ್ರೋಢೀಕರಿಸಲೇಬೇಕಾಗಿದೆ.

ಆದಾಯ ತೆರಿಗೆ ಸಲ್ಲಿಸುವ ವೇಳೆ ಈ ಮಾಹಿತಿಗಳು ಏರುಪೇರಾದರೆ ಸಮಸ್ಯೆಯಾಗುತ್ತದೆ. ಹೀಗಾಗಿ ಸಾಫ್ಟ್‌ವೇರ್‌ ಬಳಸಲು ಚಿಂತಿಸು ತ್ತಿದ್ದೇನೆ’ ಎಂದು ಜೀನ್ಸ್‌ ಸಿದ್ದ ಉಡುಪು ತಯಾರಕರಾದ ಮಲ್ಲಿಕಾರ್ಜುನ ತಿಳಿಸಿದರು. ನಗರದ ಬೆಂಗಳೂರು ರಸ್ತೆಯಲ್ಲಿ ರುವ ಅವರ ಕಾರ್ಖಾನೆಗೆ ಗುರುವಾರ ‘ಪ್ರಜಾವಾಣಿ’ ಭೇಟಿ ನೀಡಿದ ವೇಳೆ, ಅವರು ಹೈದರಬಾದ್‌ನ ತಂತ್ರಜ್ಞ ರೊಂದಿಗೆ ಚರ್ಚಿಸುತ್ತಿದ್ದರು.

* * 

ಹೊಸ ರಸೀದಿಗಳಿಲ್ಲದೆ ವಹಿವಾಟು ಪೂರ್ಣ ಸ್ಥಗಿತಗೊಂಡಿದೆ. ದುಬಾರಿಯಲ್ಲದ ಮತ್ತು ಸರಳ ಸಾಫ್ಟ್‌ವೇರ್‌ ಬಳಸಲು ನಿರ್ಧರಿಸಿರುವೆ

ಮಲ್ಲಿಕಾರ್ಜುನ

ಜೀನ್ಸ್‌ ಸಿದ್ದ ಉಡುಪು ತಯಾರಕರು

ಪ್ರತಿಕ್ರಿಯಿಸಿ (+)