ಶನಿವಾರ, ಡಿಸೆಂಬರ್ 7, 2019
24 °C

ದಕ್ಷಿಣ ಕೊರಿಯಾ, ಇಟಲಿ ನಾಯಕರ ಜತೆ ಮೋದಿ ದ್ವಿಪಕ್ಷೀಯ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಕೊರಿಯಾ, ಇಟಲಿ ನಾಯಕರ ಜತೆ ಮೋದಿ ದ್ವಿಪಕ್ಷೀಯ ಚರ್ಚೆ

ಹ್ಯಾಂಬರ್ಗ್‌: ಜಿ20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಶನಿವಾರ ಇಟಲಿ ಪ್ರಧಾನಿ ಪಾವ್ಲೊ ಗೆಂಟಿಲೋನಿ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇ ಅವರನ್ನು ಭೇಟಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ದ್ವಿಪಕ್ಷೀಯ ಸಂಬಂಧಗಳು ಮತ್ತು ಸಹಕಾರಗಳನ್ನು ಹೆಚ್ಚಿಸುವ ಮಾರ್ಗೋಪಾಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ಜರ್ಮನಿಯ ಬಂದರು ನಗರಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಜತೆಗೆ ದ್ವಿಪಕ್ಷೀಯ ಸಭೆಗಳು ನಡೆದಿವೆ.

ನಂತರ, ಮೋದಿ ಅವರು ಮೆಕ್ಸಿಕೊ, ಅರ್ಜೆಂಟೈನಾ, ಇಂಗ್ಲೆಂಡ್‌, ವಿಯೆಟ್ನಾಮ್‌ನ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

ಬಳಿಕ, ಮೋದಿ ಅವರು ಜಿ20 ಶೃಂಗದ ಎರಡನೇ ದಿನದ ಸಭೆಯಲ್ಲಿ ಭಾಗಿಯಾಗುವರು. ಆಫ್ರಿಕಾದೊಂದಿಗಿನ ಸಹಯೋಗದಲ್ಲಿ ವಲಸೆ ಮತ್ತು ಆರೋಗ್ಯ, ಡಿಜಿಟಲೀಕರಣ, ಮಹಿಳಾ ಸಬಲೀಕರಣ ಹಾಗೂ ಉದ್ಯೋಗ ಕುರಿತಾಗಿ ಚರ್ಚೆ ನಡೆಯಲಿದೆ.

ಅಧಿವೇಶನದಲ್ಲಿ ಭಾಗವಹಿಸಿದ ಬಳಿಕ ಸಂಜೆ ಮೋದಿ ಅವರು ದೆಹಲಿಗೆ ಹಿಂದಿರುಗುವರು.

ಪ್ರತಿಕ್ರಿಯಿಸಿ (+)