ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ ನಡುವೆಯೇ ಬೃಹತ್ ಪ್ರತಿಭಟನೆ

Last Updated 8 ಜುಲೈ 2017, 10:07 IST
ಅಕ್ಷರ ಗಾತ್ರ

ಬಂಟ್ವಾಳ: ಬಿ.ಸಿ.ರೋಡ್‌ನಲ್ಲಿ ಮಂಗಳ ವಾರ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಕೊಲೆ ಹಾಗೂ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಬಿ.ಸಿ. ರೋಡ್‌ನಲ್ಲಿ ಶುಕ್ರವಾರ ನಿಷೇಧಾಜ್ಞೆ ನಡುವೆಯೇ  ಬೃಹತ್ ಪ್ರತಿಭಟನೆ ನಡೆಯಿತು.

ಸಂಸದರಾದ  ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ವಿ.ಸುನಿಲ್‌ ಕುಮಾರ್ ಸಹಿತ ಸಾವಿರಾರು ಮಂದಿ ಹಿಂದೂ ಸಂಘಟನೆ ಕಾರ್ಯಕ ರ್ತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತ ನಾಡಿ, ರಾಜ್ಯ ಸರ್ಕಾರ ಕೇವಲ ಓಟಿನ ರಾಜಕೀಯ ನೆಪದಲ್ಲಿ ಮುಸ್ಲಿಂ ಭಯೋ ತ್ಪಾದಕರನ್ನು ಬೆಂಬಲಿಸುತ್ತಿದೆ. ಇವರಿಗೆ ನಿಜವಾಗಿಯೂ ತಾಕತ್ತಿದ್ದರೆ ಪಿಎಫ್ಐ ಸಂಘಟನೆ ನಿಷೇಧಿಸಲಿ ಎಂದು ಸವಾಲು ಹಾಕಿದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಹಿಂದೂಗಳ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು, ರಕ್ಷಣೆ ಸಿಗದೇ ಇದ್ದಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದರು. ಜಿಲ್ಲೆಯಲ್ಲಿ ಸಮಾಜ ಘಾತುಕ ಮತ್ತು ಭಯೋತ್ಪಾದಕರನ್ನು ಬೆಳೆಸಲು ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ‘ಜಿಲ್ಲೆಯಲ್ಲಿ ಹಿಂದೂ ಸಮಾಜದ ವ್ಯಕ್ತಿಗ ಳನ್ನೇ ಗುರಿಯಾಗಿಸಿಕೊಂಡ ಮತಾಂಧ ಶಕ್ತಿಗಳು ನಿರಂತರ ದಾಳಿ ನಡೆಸುತ್ತಿವೆ. ಕಾನೂನಿನ ಮೇಲಿನ ಗೌರವದಿಂದ ನಾವು ಈ ಹಿಂದೆ ನಡೆಸಬೇಕಿದ್ದ ಪ್ರತಿ ಭಟನೆ ಮುಂದೂಡಿದ್ದೇವೆ.

ಆದರೆ ಇದೀಗ ಹಿಂದೂ ಸಮಾಜದ ತಾಳ್ಮೆಯ ಕಟ್ಟೆ ಒಡೆದಿದೆ. ಈ ನೋವು ತೋರ್ಪ ಡಿಸಲು ಪ್ರತಿಭಟನೆ ಅನಿವಾರ್ಯ ವಾಗಿದೆ. ರಾಜ್ಯದಲ್ಲಿ ಗೋಹತ್ಯೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಸರ್ಕಾರವೇ ಪುಷ್ಟಿ ನೀಡುತ್ತಿದ್ದು, ಇದರ ವಿರುದ್ದ ಹೋರಾಟ ನಿರಂತರವಾಗಿ ಮುನ್ನಡೆಯಲಿದೆ’ ಎಂದರು.

ಹರಿದು ಬಂದ ಜನಸಾಗರ: ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ ಇದ್ದರೂ ವಿವಿಧ ಹಿಂದೂ ಸಂಘಟನೆಗಳು 'ಬಿ.ಸಿ.ರೋಡ್ ಚಲೋ' ಮಾದ ರಿಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆ ಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಪೊಲೀಸರು ಮತ್ತು ಜನ ಸಂದಣಿ ಸೇರಿ ಕೆಲಹೊತ್ತು ಈ ಪರಿಸರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು.

ಇದೇ ವೇಳೆ ಪೊಲೀಸರು ರಿಕ್ಷಾವೊಂದರಲ್ಲಿ ಧ್ವನಿವ ರ್ಧಕ ಬಳಸಿ ಯಾರು ಕೂಡಾ ಐದಕ್ಕಿಂತ ಹೆಚ್ಚು ಮಂದಿ ಗುಂಪು ಗುಂಪಾಗಿ ಕಾಣಿಸಿಕೊಳ್ಳಬಾರದು. ಯಾವುದೇ ಸಭೆ ಸಮಾರಂಭ ನಡೆಸಬಾರದು ಎಂಬ ಎಚ್ಚರಿಕೆ ಸಂದೇಶ ತಾಲ್ಲೂಕಿನ ವಿವಿಧೆಡೆ ಘೋಷಿಸಿದರು.

ಆದರೆ ಸುಮಾರು 11 ಗಂಟೆಗೆ ಅಲ್ಲಲ್ಲಿ ಜಮಾಯಿಸಿದ್ದ ಸಂಘ ಪರಿವಾ ರದ ಸಂಘಟನೆಗಳ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಸಮಾ ಜೋತ್ಸವ ಮಾದರಿಯಲ್ಲಿ ಬಿ.ಸಿ.ರೋಡ್ ಬಸ್ ನಿಲ್ದಾಣ ಬಳಿ ಜಮಾಯಿಸಿದರು. ಪ್ರತಿಭಟನಾಕಾರರ ಮಾತು ಮುಗಿಯುತ್ತಿದ್ದಂತೆಯೇ ಅವರನ್ನು ಬಂಧಿಸಿ  15ಕ್ಕೂ ಮಿಕ್ಕಿ ಸರ್ಕಾರಿ ಬಸ್‌ಗಳಲ್ಲಿ ಪುತ್ತೂರು ಮತ್ತು ಬೆಳ್ತಂಗಡಿ ಮತ್ತಿತರ ಕಡೆಗೆ ಕಳುಹಿಸಲಾಯಿತು. ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಇದ್ದರು.

ಪ್ರತಿಭಟನೆಯಲ್ಲಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌, ಎಸ್. ಅಂಗಾರ, ಬಿಜೆಪಿ ಮತ್ತು ವಿವಿಧ ಸಂಘ ಟನೆಗಳ ಮುಖಂಡರಾದ ವಿ.ಸುನಿಲ್ ಕುಮಾರ್,  ಸಂಜೀವ ಮಠಂದೂರು, ಬಿ.ನಾಗರಾಜ ಶೆಟ್ಟಿ, ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಕೆ. ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯರಾದ ರವೀಂದ್ರ ಕಂಬಳಿ, ಎಂ.ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಪಿ.ಎಸ್. ಪ್ರಕಾಶ್,  ಉಳಿ ಪಾಡಿಗುತ್ತು ರಾಜೇಶ ನಾಯ್ಕ್, ಸುಲೋ ಚನಾ ಜಿ.ಕೆ. ಭಟ್, ಬಿ. ದೇವದಾಸ ಶೆಟ್ಟಿ, ಹರೀಶ್ ಪೂಂಜಾ, ರಾಮದಾಸ್ ಬಂ ಟ್ವಾಳ, ಮೋನಪ್ಪ ದೇವಸ್ಯ, ಶರಣ್ ಪಂಪ್‌ವೆಲ್‌, ಜಗದೀಶ ಶೇಣವ, ಸತ್ಯಜಿತ್ ಸುರತ್ಕಲ್, ರಂಜನ್ ಗೌಡ, ದಿನೇಶ್ ಅಮ್ಟೂರು, ಪುರುಷೋತ್ತಮ ಸಾಲ್ಯಾನ್, ಕೆ.ಪಿ.ಜಗದೀಶ್ ಅಧಿಕಾರಿ, ಚಂದ್ರಹಾಸ ಉಚ್ಚಿಲ, ಜಿತೇಂದ್ರ ಕೊಟ್ಟಾರಿ,  ಅರುಣ್ ಕುಮಾರ್ ಪುತ್ತಿಲ, ಮುರಳೀಕೃಷ್ಣ ಹಸಂತಡ್ಕ, ಸಂತೋಷ್ ಕುಮಾರ್ ಬೋಳಿಯಾರು, ರಾಜೇಶ್ ಬನ್ನೂರು, ರವಿರಾಜ್ ಬಿ.ಸಿ.ರೋಡು, ರಾಧಾಕೃಷ್ಣ ಅಡ್ಯಂತಾಯ, ಸರಪಾಡಿ ಅಶೋಕ್ ಶೆಟ್ಟಿ, ಎ. ಗೋವಿಂದ ಪ್ರಭು, ಬಿ.ದಿನೇಶ್ ಭಂಡಾರಿ, ಚೆನ್ನಪ್ಪ ಕೋಟ್ಯಾನ್, ರಮಾನಾಥ ರಾಯಿ, ವಜ್ರನಾಭ ಕಲ್ಲಡ್ಕ ಇದ್ದರು. ಅಂಗಡಿ ಮುಂಗಟ್ಟು ಬಂದ್: ಪ್ರತಿ ಭಟನೆ ನಿಮಿತ್ತ ಬಿ.ಸಿ.ರೋಡ್
ಪರಿಸರ ದಲ್ಲಿ ಶುಕ್ರವಾರ ಮಧ್ಯಾಹ್ನದ ತನಕ ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತ ಬಂದ್ ಮಾಡಿ ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT