ಶುಕ್ರವಾರ, ಡಿಸೆಂಬರ್ 6, 2019
17 °C

ವಿಶ್ವಸಂಸ್ಥೆಯಲ್ಲಿ 122 ರಾಷ್ಟ್ರಗಳ ಮತದೊಂದಿಗೆ ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದ ಅಂಗೀಕಾರ; ಹೊರಗುಳಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆಯಲ್ಲಿ 122 ರಾಷ್ಟ್ರಗಳ ಮತದೊಂದಿಗೆ ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದ ಅಂಗೀಕಾರ; ಹೊರಗುಳಿದ ಭಾರತ

ವಿಶ್ವಸಂಸ್ಥೆ: ಭಾರತ ಸೇರಿದಂತೆ ಅಮೆರಿಕ, ಬ್ರಿಟನ್‌, ಫ್ರಾನ್ಸ್‌ನಂತಹ ಪ್ರಬಲ ರಾಷ್ಟ್ರಗಳ ಭಾರೀ ವಿರೋಧದ ನಡುವೆಯೂ ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದವನ್ನು ವಿಶ್ವಸಂಸ್ಥೆ ಅಳವಡಿಸಿಕೊಂಡಿದೆ.

ವಿಶ್ವಸಂಸ್ಥೆಯ ಐತಿಹಾಸಿಕ ಹಾಗೂ ಪ್ರಥಮ ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ 122 ರಾಷ್ಟ್ರಗಳು ಮತ ಹಾಕಿವೆ.

ಪರಮಾಣು ನಿಶಸ್ತ್ರೀಕರಣಕ್ಕೆ 20 ವರ್ಷಗಳಿಂದ ಸುದೀರ್ಘ ಮಾತುಕತೆ ನಡೆಸಿದ್ದು, ಕಾನೂನುಬದ್ಧವಾಗಿ ಪರಮಾಣು ಶಸ್ತ್ರಾಸ್ತ್ರಗಳ ನಿಷೇಧ ಒಪ್ಪಂದವನ್ನು ಒಂದು ರಾಷ್ಟ್ರದ(ನೆದರ್‌ಲೆಂಡ್‌) ವಿರೋಧ, ಒಂದು ರಾಷ್ಟ್ರದ(ಸಿಂಗಾಪುರ) ಬಹಿಷ್ಕಾರದ ಹೊರತಾಗಿ 122 ರಾಷ್ಟ್ರಗಳ ಬಹುಮತ ಹಾಗೂ ಚಪ್ಪಾಳೆಯೊಂದಿಗೆ ಶುಕ್ರವಾರ ವಿಶ್ವಸಂಸ್ಥೆ ಅಳವಡಿಸಿಕೊಂಡಿತು.

ಆದರೆ, ಅಣ್ವಸ್ತ್ರ ಹೊಂದಿದ ಅಮೆರಿಕ, ರಷ್ಯಾ, ಬ್ರಿಟನ್‌, ಚೀನಾ, ಫ್ರಾನ್ಸ್‌, ಭಾರತ, ಪಾಕಿಸ್ತಾನ, ಉತ್ತರ ಕೊರಿಯ ಮತ್ತು ಇಸ್ರೇಲ್‌ ಈ ಮಾತುಕತೆಯಲ್ಲಿ ಭಾಗವಹಿಸಿಲ್ಲ. 1945ರಲ್ಲಿ ಅಣ್ವಸ್ತ್ರ ದಾಳಿಗೆ ತುತ್ತಾದ ಜಪಾನ್‌ ಕೂಡ ಸಭೆಯನ್ನು ಬಹಿಷ್ಕರಿಸಿದೆ.

ಮೂರು ವಾರಗಳ ಅಣ್ವಸ್ತ್ರ ನಿಷೇಧ ಒಪ್ಪಂದ ಸಭೆಯಲ್ಲಿ ಬ್ರೆಜಿಲ್‌, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ಸೇರಿದಂತೆ  ಆಸ್ಟ್ರೇಲಿಯಾ ನೇತೃತ್ವದಲ್ಲಿ 141ರಾಷ್ಟ್ರಗಳು ಭಾಗವಹಿಸಿವೆ.

ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಗುರಿಯನ್ನು ಕಾನೂನುಬದ್ಧವಾಗಿಸುವ ಕುರಿತು ಮಾತುಕತೆ ನಡೆಸಲು ಪ್ರಸಕ್ತ ವರ್ಷ ಮಾರ್ಚ್‌ನಲ್ಲಿ ಒಂದು ಮಹತ್ವದ ಅಧಿವೇಶನ ನಡೆಸಲಾಗಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, 120ಕ್ಕೂ ಹೆಚ್ಚಿನ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರ ನಿಷೇಧಿಸುವುದನ್ನು  ಕಾನೂನುಬದ್ಧವಾಗಿಸುವ ಸಂಬಂಧ ಮಾತುಕತೆ ನಡೆಸಲು ಒಂದು ಸಮ್ಮೇಳನ ನಡೆಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯಕ್ಕೆ ಮತ ಹಾಕಿದ್ದರು.

ಭಾರತ ಆ ನಿರ್ಣಯದ ಮತದಾನದಿಂದ ದೂರ ಉಳಿದಿತ್ತು.

ಪ್ರತಿಕ್ರಿಯಿಸಿ (+)