ಭಾನುವಾರ, ಡಿಸೆಂಬರ್ 15, 2019
18 °C

ಅನುಮತಿ ಇಲ್ಲದೆ ವರ್ತಕರ ಭೇಟಿಗೆ ಜಿಎಸ್‌ಟಿ ಅಧಿಕಾರಿಗಳಿಗೆ ಅಧಿಕಾರವಿಲ್ಲ: ಕೇಂದ್ರ ಸರ್ಕಾರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅನುಮತಿ ಇಲ್ಲದೆ ವರ್ತಕರ ಭೇಟಿಗೆ ಜಿಎಸ್‌ಟಿ ಅಧಿಕಾರಿಗಳಿಗೆ ಅಧಿಕಾರವಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಅನುಮತಿ ಪಡೆಯದೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಬಂಧಿಸಿದಂತೆ ಇಲಾಖೆಯ ಯಾವುದೇ ಅಧಿಕಾರಿಯು ವರ್ತಕರನ್ನು ಸಂಪರ್ಕಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

ಜಿಎಸ್‌ಟಿ ಅಧಿಕಾರಿಗಳೆಂದು ಹೇಳಿಕೊಂಡು ವರ್ತಕರ ಬಳಿ ಹಣ ವಸೂಲಿ ಮಾಡಿರುವ ಕುರಿತು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈ ಸಂಬಂಧ ಜಿಎಸ್‌ಟಿ ದೆಹಲಿ ವಲಯದ ಮುಖ್ಯ ಆಯುಕ್ತರ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ವರ್ತಕರು ಹಾಗೂ ವ್ಯಾಪಾರೀ ಕೇಂದ್ರಗಳಿಗೆ ಅನುಮತಿಯಿಲ್ಲದೆ ಇಲಾಖೆಯ ಯಾವುದೇ ಅಧಿಕಾರಿ ಭೇಟಿ ನೀಡುವಂತಿಲ್ಲ ಎಂದಿದೆ.

ವರ್ತಕರಿಗೆ ಜಿಎಸ್‌ಟಿ ಅಳವಡಿಕೆಯಲ್ಲಿ ಸುಲಭವಾಗಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯನಿರ್ವಹಿಸಲಿದೆ. ಈ ಸಂಬಂಧ ವ್ಯಾಪಾರಿಗಳು ಯಾವುದೇ ರೀತಿಯ ತೊಂದರೆ ಎದುರಾದರೆ ದೂರು ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)