ಶುಕ್ರವಾರ, ಡಿಸೆಂಬರ್ 6, 2019
19 °C

ರಬಾಡ ಮೇಲೆ ಒಂದು ಪಂದ್ಯ ನಿಷೇಧ

Published:
Updated:
ರಬಾಡ ಮೇಲೆ ಒಂದು ಪಂದ್ಯ ನಿಷೇಧ

ಲಂಡನ್‌: ಅಂತರ ರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನೀತಿ ಸಂಹಿತೆಗೆ ವಿರುದ್ಧವಾಗಿ ನಡೆದುಕೊಂಡಿರುವ ಕಾರಣ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅವರ ಮೇಲೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಹೀಗಾಗಿ ಅವರು ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಆಡುವಂತಿಲ್ಲ.ಗುರುವಾರ ಆರಂಭವಾದ ಇಂಗ್ಲೆಂಡ್‌ ವಿರುದ್ಧದ ಪ್ರಥಮ ಟೆಸ್ಟ್‌ ಪಂದ್ಯದ ಮೊದಲ ದಿನ ಬೆನ್‌ ಸ್ಟೋಕ್ಸ್‌ ಅವರ ವಿಕೆಟ್‌ ಪಡೆದಿದ್ದ ರಬಾಡ, ಸ್ಟೋಕ್ಸ್‌ ಪೆವಿಲಿಯನ್‌ನತ್ತ ಹೊರಟಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.ಅವರ ಮಾತುಗಳು ವಿಕೆಟ್‌ಗಳಿಗೆ ಅಳವಡಿಸಿರುವ ಮೈಕ್ರೋಫೋನ್‌ಗಳಲ್ಲಿ ದಾಖಲಾಗಿದ್ದವು. ಅಂಗಳದ ಅಂಪೈರ್‌ಗಳಾದ ಪಾಲ್‌ ರೀಫಲ್‌ ಮತ್ತು ಎಸ್‌. ರವಿ, ಮೂರನೇ ಅಂಪೈರ್‌ ಸಿಮನ್‌ ಫ್ರೈ ಅವರು ಐಸಿಸಿ ಶಿಸ್ತು ಸಮಿತಿಗೆ ದೂರು ನೀಡಿದ್ದರು. ಹೀಗಾಗಿ ಸಮಿತಿ ಅವರ ಮೇಲೆ ನಿಷೇಧ ವಿಧಿಸಿದೆ.

ಪ್ರತಿಕ್ರಿಯಿಸಿ (+)