ಶನಿವಾರ, ಡಿಸೆಂಬರ್ 7, 2019
25 °C

45ನೇ ವಸಂತಕ್ಕೆ ಕಾಲಿಟ್ಟ ಸೌರವ್ ಗಂಗೂಲಿ

Published:
Updated:
45ನೇ ವಸಂತಕ್ಕೆ ಕಾಲಿಟ್ಟ ಸೌರವ್ ಗಂಗೂಲಿ

ಕೋಲ್ಕತ್ತ: ಹಿರಿಯ ಕ್ರಿಕೆಟಿಗ ಮತ್ತು ಬಂಗಾಳ ಕ್ರಿಕೆಟ್‌ ಸಂಸ್ಥೆಯ  ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಶನಿವಾರ 45ನೇ ವಸಂತಕ್ಕೆ ಕಾಲಿಟ್ಟರು.ಕ್ರಿಕೆಟ್‌ ವಲಯದಲ್ಲಿ ‘ದಾದಾ’ ಎಂದೇ ಕರೆಯಲಾಗುವ ಗಂಗೂಲಿ ಯವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯೆಲ್‌, ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ಹರಭಜನ್‌ ಸಿಂಗ್‌  ಯುವರಾಜ್‌ ಸಿಂಗ್‌, ಸುರೇಶ್‌ ರೈನಾ ಮತ್ತು ಪ್ರಗ್ಯಾನ್‌ ಓಜಾ ಸೇರಿದಂತೆ ಹಲ ವರು ಗಂಗೂಲಿಗೆ ಶುಭ ಹಾರೈಸಿದ್ದಾರೆ.‘ದಾದಾ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು’ ಎಂದು ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ.‘ಭಾರತ ತಂಡದಲ್ಲಿ ನಿಮ್ಮೊಂದಿಗೆ ಆಡಿದ ಪ್ರತಿ ಕ್ಷಣವೂ ಅವಿಸ್ಮರಣೀಯ. ನಿಮಗೆ ಶುಭವಾಗಲಿ’ ಎಂದು ಸಚಿನ್‌ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.‘ಭಾರತದ ಕ್ರಿಕೆಟ್‌ ಲೋಕಕ್ಕೆ ನಿಮ್ಮ ಕೊಡುಗೆ ಅನನ್ಯ. ಟೆಸ್ಟ್‌ ಮಾದರಿಯಲ್ಲಿ ನಾನು ಏನಾದರೂ ಸಾಧನೆ ಮಾಡಿದ್ದರೆ  ಅದಕ್ಕೆ ನೀವೆ ಕಾರಣ. ನಿಮ್ಮ ಬೆಂಬಲ ದಿಂದಲೇ ಎಲ್ಲವೂ ಸಾಧ್ಯವಾಗಿದೆ’ ಎಂದು ಸೆಹ್ವಾಗ್‌ ಬರೆದುಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)