ಭಾನುವಾರ, ಡಿಸೆಂಬರ್ 8, 2019
21 °C

ಇಂದು ಸಿರಿಧಾನ್ಯ ಅಡುಗೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ಸಿರಿಧಾನ್ಯ ಅಡುಗೆ ಸ್ಪರ್ಧೆ

ಬೆಂಗಳೂರು: ಏಳನೇ ಸಾವಯವ ಮತ್ತು ಸಿರಿಧಾನ್ಯ ಮೇಳ ನಾಗರಬಾವಿಯಲ್ಲಿ ಶನಿವಾರ  ಆರಂಭವಾಯಿತು.ಭಾನುವಾರ (ಜುಲೈ 9)ರಂದು ಸಿರಿಧಾನ್ಯಗಳ ಅಡುಗೆ ತಯಾರಿಕೆ ಸ್ಪರ್ಧೆ ನಡೆಯಲಿದೆ. ಮೇಳದಲ್ಲಿ ಸುಮಾರು 70 ಮಳಿಗೆಗಳನ್ನು ತೆರೆಯಲಾಗಿದ್ದು,  ಸಿರಿಧಾನ್ಯ ಮತ್ತು ಅವುಗಳಿಂದ ತಯಾರಿಸಿದ ಖಾದ್ಯಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.ಊದಲು ಪಿಜ್ಜಾ, ರಾಗಿ ಕೇಕ್, ಬರಗು ಸಮೋಸ, ಸಾಮೆ ಅಣಬೆ ಬಿರಿಯಾನಿ, ನವಣೆ ಕಟ್‍ಲೆಟ್, ನವಣೆ ಬ್ರೆಡ್, ಜೋಳದ ಜೀರಾ ಲಸ್ಸಿ, ನವಣೆ ಪೊಂಗಲ್, ಹಾರಕ ಬಿಸಿಬೇಳೆಬಾತ್, ಸಾಮೆ ಪಾಯಸ, ಸಜ್ಜೆ ರೊಟ್ಟಿ, ಸಾಮೆ ಚೌಚೌಬಾತ್ ಸೇರಿದಂತೆ ಹಲವು ಬಗೆಯ ಖಾದ್ಯಗಳ ರುಚಿ ಸವಿಯಲು ಮೇಳದಲ್ಲಿ ಅವಕಾಶವಿದೆ.ಜಲ ಕೃಷಿ (ಹೈಡ್ರೋಫೋನಿಕ್ಸ್) ಮತ್ತು ತಾರಸಿ ತೋಟದ (ಟೆರೇಸ್ ಗಾರ್ಡನಿಂಗ್‌) ಪ್ರಾತ್ಯಕ್ಷಿಕೆ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.ಸಿರಿಧಾನ್ಯಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ, ಜೈವಿಕ್ ಕೃಷಿಕ್ ಸೊಸೈಟಿ ಸೇರಿ ಎರಡು ದಿನಗಳ ಈ ಮೇಳವನ್ನು ಹಮ್ಮಿಕೊಂಡಿವೆ.

ಪ್ರತಿಕ್ರಿಯಿಸಿ (+)