ಮಂಗಳವಾರ, ಡಿಸೆಂಬರ್ 10, 2019
17 °C

ಚಿಕ್ಕಮಗಳೂರು–ಕುಪ್ಪಳಿ ಬ್ರೆವೆಟ್ ಸೈಕಲ್ ಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು–ಕುಪ್ಪಳಿ ಬ್ರೆವೆಟ್ ಸೈಕಲ್ ಯಾನಕ್ಕೆ ಚಾಲನೆ

ಚಿಕ್ಕಮಗಳೂರು: ಬ್ರೆವೆಟ್ ಸೈಕಲ್ ಯಾನಕ್ಕೆ ಭಾನುವಾರ ಇಲ್ಲಿ ಚಾಲನೆ ನೀಡಲಾಯಿತು. ಸೈಕಲ್ ಯಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಭಾಗಿದ್ದರು.

ಯಾನ ಚಿಕ್ಕಮಗಳೂರಿನಿಂದ ಆಲ್ದೂರು–ಬಾಳೆಹೊನ್ನೂರು–ಕೊಪ್ಪ ಮಾರ್ಗವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕವಿಮನೆ (ಕುಪ್ಪಳಿ) ತಲುಪಿ ಚಿಕ್ಕಮಗಳೂರಿಗೆ ವಾಪಸಾಗಲಿದೆ.

ಶಿವಮೊಗ್ಗ, ಮಂಡ್ಯ, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಉಡುಪಿ ಮೊದಲಾದ ಜಿಲ್ಲೆಗಳ 43 ಮಂದಿ ಭಾಗವಹಿಸಿದ್ದಾರೆ. ಯಾನದ ಅವಧಿ 13.30ಗಂಟೆ ನಿಗದಿಪಡಿಸಲಾಗಿದೆ.

ಪ್ರತಿಕ್ರಿಯಿಸಿ (+)