ಮಹಿಳೆಯರಿಂದ ಪಾದ ತೊಳೆಸಿಕೊಂಡ ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್: ವಿಡಿಯೊ ವೈರಲ್

ಜೆಮ್‌ಶ್ಷೆಡ್‌ಪುರ: ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ಮಹಿಳೆಯರು ತೊಳೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಜೆಮ್‌ಶ್ಷೆಡ್‌ಪುರದ ಬ್ರಹ್ಮ ಲೋಕ ಧಾಮದಲ್ಲಿ ನಡೆಯುತ್ತಿರುವ ‘ಗುರು ಮಹೋತ್ಸವ’ ಸಮಾರಂಭದಲ್ಲಿ(ಜೂನ್ 7ರಂದು) ಇಬ್ಬರು ಮಹಿಳೆಯರು ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ತೊಳೆದಿದ್ದಾರೆ. ಈ ವೀಡಿಯೊ ಎಲ್ಲೆಡೆ ಹರಿದಾಡುತ್ತಾ ಸುದ್ದಿ ಮಾಡುತ್ತಿದೆ.
#WATCH: Women wash feet of #Jharkhand CM Raghubar Das on a 'Guru Mahotsav' event held at Jamshedpur's Brahma Lok Dham. (July 7) pic.twitter.com/86wUeIpKzh
— ANI (@ANI_news) July 9, 2017
ಭದ್ರತಾ ಸಿಬ್ಬಂದಿಯೊಟ್ಟಿಗೆ ಕೈ ಮುಗಿದುಕೊಂಡೇ ಬರುವ ರಘುವರ್ ದಾಸ್ ಅವರನ್ನು ದೊಡ್ಡ ತಟ್ಟೆಯೊಂದರಲ್ಲಿ ನಿಲ್ಲಿಸಿ ಹೂವಿನ ಪಕಳೆಗಳನ್ನೊಳಗೊಂಡ ನೀರನ್ನು ಇಬ್ಬರು ಮಹಿಳೆಯರು ಬಿಂದಿಗೆಯಿಂದ ಅವರ ಪಾದಕ್ಕೆ ಹಾಕಿ ತೊಳೆಯುತ್ತಾರೆ. ಬಳಿಕ, ಮಹಿಳೆಯರು ಮೇಲೆದ್ದು ಹಿಂದಕ್ಕೆ ಸರಿಯುತ್ತಿದ್ದಂತೆ ಜನರಿಗೆ ಕೈ ಮುಗಿಯುತ್ತಲೇ ರಘುವರ್ ದಾಸ್ ಮುಂದೆ ಹೋಗುವ ದೃಶ್ಯಗಳು 14 ಸೆಕೆಂಡ್ನ ವಿಡಿಯೊದಲ್ಲಿದೆ.