ಸೋಮವಾರ, ಡಿಸೆಂಬರ್ 9, 2019
25 °C

ಕಣ್ಣು ತಣಿಸುವ ಮರಳು ಕಲಾಕೃತಿ...

Published:
Updated:
ಕಣ್ಣು ತಣಿಸುವ ಮರಳು ಕಲಾಕೃತಿ...

ಸಾಗರದ ದಡದಲ್ಲಿ ಮನಮೋಹಕವಾಗಿ ನಿರ್ಮಾಣವಾಗಿದೆ 150 ಮರಳಿನ ಕಲಾಕೃತಿಗಳು. ಪ್ಯಾರಿಸ್ ಡಿಸ್ನಿಲ್ಯಾಂಡ್‌ 25 ವರ್ಷ ಪೂರೈಸಿದ ಸಲುವಾಗಿ ಬೆಲ್ಚಿಯಂ ಆಸ್ಟೆಂಡ್ ಸಮುದ್ರದ ತಟದಲ್ಲಿ ಡಿಸ್ನಿ ಪಾತ್ರಗಳು ಹಾಗೂ ಸನ್ನಿವೇಶಗಳನ್ನು ಹೀಗೆ ಮರುಸೃಷ್ಟಿಸಲಾಗಿದೆ. ಜಗತ್ತಿನ 40 ಕಲಾವಿದರು ಸೇರಿ ನಿರ್ಮಿಸಿರುವ ಈ ಹೊಸ ಡಿಸ್ನಿಲ್ಯಾಂಡ್‌ ಜನರನ್ನು ಆಕರ್ಷಿಸುತ್ತಿದೆ.

ಅಲೆಕ್ಸಾಂಡರ್ ಡಿಮಾನ್ ಈ ಕಲಾಕೃತಿಗಳ ನಿರ್ಮಾಣದ ಹಿಂದಿರುವ ಕೈ. ಜೂನ್ 27ರಿಂದ ಸೆಪ್ಟೆಂಬರ್‌ವರೆಗೆ ಇಲ್ಲಿ ಪ್ರದರ್ಶನ ಉತ್ಸವವೂ ನಡೆಯಲಿದೆ. ಅಂದ ಹಾಗೆ ಈ ಮರಳುಶಿಲ್ಪಗಳನ್ನು ನಿರ್ಮಿಸಲು 700 ಟನ್ ಮರಳು ಉಪಯೋಗಿಸಲಾಗಿದೆಯಂತೆ. 

ಪ್ರತಿಕ್ರಿಯಿಸಿ (+)