ಬುಧವಾರ, ಡಿಸೆಂಬರ್ 11, 2019
20 °C

ಡ್ರೋನ್, ರೋಬೊಗಳಿಗೆ ಜೇನುಹುಳ ಸ್ಫೂರ್ತಿ

Published:
Updated:
ಡ್ರೋನ್, ರೋಬೊಗಳಿಗೆ ಜೇನುಹುಳ ಸ್ಫೂರ್ತಿ

ಡ್ರೋನ್ ಹಾಗೂ ರೋಬೊಗಳು ವಾತಾವರಣದ ಬಣ್ಣಗಳನ್ನು ಸ್ಪಷ್ಟವಾಗಿ ಗ್ರಹಿಸುವಂತೆ ಮಾಡಲು ಜೇನು ಹುಳುಗಳು ಸ್ಫೂರ್ತಿಯಾಗಲಿವೆ!

ಹೌದು, ಬೆಳಕಿಗೆ ಅನುಗುಣವಾಗಿ ವಾತಾವರಣದಲ್ಲಿನ ಬಣ್ಣ ನಿರಂತರವಾಗಿ ಬದಲಾಗುತ್ತಿರುತ್ತದೆ. ಇಂತಹ ಸಮಯದಲ್ಲಿ ಡ್ರೋನ್‌ ಹಾಗೂ ರೋಬೊಗಳಿಗೆ ಬಣ್ಣಗಳನ್ನು ಗ್ರಹಿಸಲು ಕಷ್ಟವಾಗಬಹುದು. ಅದಕ್ಕಾಗಿ ಜೇನುಹುಳುಗಳ ತಂತ್ರವನ್ನು ಇವುಗಳಿಗೆ ಅಳವಡಿಸುವ ಕುರಿತು ಆಸ್ಟ್ರೇಲಿಯಾದ ಮೆಲ್ಬರ್ನ್‌ ವಿಶ್ವವಿದ್ಯಾಲಯ ಹಾಗೂ ಮೊನಾಶ್‌ ವಿಶ್ವವಿದ್ಯಾಲಯಗಳ ಸಂಶೋಧಕರು ಅಧ್ಯಯನದಲ್ಲಿ ತೊಡಗಿದ್ದಾರೆ.

ಜೇನು ಹುಳುಗಳು ವಾತಾವರಣ ಬದಲಾವಣೆ ಸಂದರ್ಭದಲ್ಲಿ ಬಣ್ಣಗಳನ್ನು ಹೇಗೆ ಗ್ರಹಿಸುತ್ತವೆ ಎಂಬ ಮಾಹಿತಿಯನ್ನು ಸಂಶೋಧಕರು ಕಲೆಹಾಕುತ್ತಿದ್ದಾರೆ. ಕ್ಯಾಮರಾ ಅಥವಾ ರೋಬೊಗಳು ವಸ್ತುಗಳ ಬಣ್ಣ ಗ್ರಹಿಸುವ ಸಂದರ್ಭದಲ್ಲಿ ಅದರ ಬಣ್ಣ ಬದಲಾಗುತ್ತಿರುತ್ತವೆ. ಸದ್ಯ ಬೂದಿ ಬಣ್ಣವನ್ನು ಭೂಮಿಯೆಂದು ಭಾವಿಸಲಾಗುತ್ತಿದೆ ಎಂದು ಆಸ್ಟ್ರೇಲಿಯಾದ ಆರ್‌ಎಂಈಟಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಂಡ್ರಿಯನ್‌ ಡಯರ್‌ ಹೇಳಿದ್ದಾರೆ.

ಜೇನುಹುಳುಗಳ ತಲೆಯ ಮೇಲೆ ಹೆಚ್ಚುವರಿ ಮೂರು ಕಣ್ಣುಗಳಿರುತ್ತವೆ. ಅವುಗಳ ಮೂಲಕ ಆಕಾಶದತ್ತ ನೇರವಾಗಿ ನೋಡುವ ಸಾಮರ್ಥ್ಯ ಹೊಂದಿರುತ್ತವೆ. ಈ ಕಣ್ಣುಗಳ ರಚನೆ ಅತ್ಯಂತ ಸೂಕ್ಷ್ಮವಾಗಿದ್ದು ಇವುಗಳ ಮೂಲಕ ಬಣ್ಣಬಣ್ಣದ ಹೂವುಗಳ ಗ್ರಹಿಕೆ ಸುಲಭವಾಗುತ್ತದೆ.

ಜೇನು ಹುಳುಗಳ ಕಾರ್ಯತಂತ್ರ ಹಾಗೂ ರಚನೆಯನ್ನು ರೋಬೊ ಹಾಗೂ ಡ್ರೋನ್‌ಗಳಿಗೂ ಅಳವಡಿಸುವ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗುತ್ತಿದೆ.v

ಪ್ರತಿಕ್ರಿಯಿಸಿ (+)