ಭಾನುವಾರ, ಡಿಸೆಂಬರ್ 15, 2019
21 °C

ಯೋಗಿ ಆದಿತ್ಯನಾಥ್ ಜನತಾ ದರ್ಬಾರ್‌ನಲ್ಲಿ ನೂಕುನುಗ್ಗಲು: ಹಲವರಿಗೆ ಗಾಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಯೋಗಿ ಆದಿತ್ಯನಾಥ್ ಜನತಾ ದರ್ಬಾರ್‌ನಲ್ಲಿ ನೂಕುನುಗ್ಗಲು: ಹಲವರಿಗೆ ಗಾಯ

ಗೋರಖ್‌ಪುರ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿ ನಡೆಸಿದ ಜನತಾ ದರ್ಬಾರ್‌ನಲ್ಲಿ ನೂಕು–ನುಗ್ಗಲು, ತಳ್ಳಾಟ ನಡೆದಿದ್ದು, ಮಹಿಳೆಯರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಜನತಾ ದರ್ಬಾರ್‌ಗೆ ಸರಿಯಾದ ಸಿದ್ಧತೆ ಮಾಡದಿರುವುದೇ ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.

ಗುರು ಪೂರ್ಣಿಮೆಯ ಅಂಗವಾಗಿ ಆದಿತ್ಯನಾಥ್ ಅವರು ಭಾನುವಾರ ಬೆಳಿಗ್ಗೆ 11 ಗಂಟೆಗೆ ಗೋರಖ್‌ಪುರದ ಮಂದಿರಕ್ಕೆ ಭೇಟಿ ನೀಡಿದ್ದರು. ನಂತರ ಅವರು ಅಲ್ಲಿ ಜನತಾ ದರ್ಬಾರ್ ನಡೆಸಿದ್ದಾರೆ. ಈ ವೇಳೆ, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಹವಾಲು ಸಲ್ಲಿಸಲು ಅನೇಕ ಸಂಖ್ಯೆಯಲ್ಲಿ ಜನ ಬರತೊಡಗಿದ್ದಾರೆ. ಜನರನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ ತಳ್ಳಾಟ, ನೂಕು–ನುಗ್ಗಲು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)